Header Ads
Header Ads
Breaking News

ಕುಳಾಯಿ ಜಟ್ಟಿ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವರಿಂದ ಶಿಲಾನ್ಯಾಸ : ನಳಿನ್ ಕುಮಾರ್ ಕಟೀಲ್ ಹೇಳಿಕೆ

ಮೀನುಗಾರರ ಬಹುದಿನದ ಬೇಡಿಕೆಯಾದ ಕುಳಾಯಿ ಜಟ್ಟಿ ನಿರ್ಮಾಣ ಕಾಮಗಾರಿಗೆ ನಾಳೆ ಸಚಿವ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ಮಾಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಮಾಲ ಯೋಜನೆಯಡಿ ಮೂಲ್ಕಿ – ಕಟೀಲ್ – ಬಿ.ಸಿರೋಡ್ ವರೆಗೆ, ಮೆಲ್ಕಾರ್ ಕೊಣಾಜೆ – ತೊಕ್ಕೊಟ್ಟು ವರೆಗೆ ನಿರ್ಮಾಣಗೊಳ್ಳಲಿರುವ ರಿಂಗ್ ರೋಡ್, ಕುಲಶೇಖರದಿಂದ ಕಾರ್ಕಳ ವರೆಗಿನ ಚತುಷ್ಪಥ ಕಾಮಗಾರಿಗೆ ಹಾಗೂ ಕುಳಾಯಿ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. 

ಬಿಸಿ ರೋಡ್‌ನಿಂದ ಪುಂಜಾಲಕಟ್ಟೆ ತನಕ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರ ಮುಗ್ರೋಡಿ ಕನ್‌ಸ್ಟ್ರಕ್ಷನವರು ಆರಂಭಿಸಿದ್ದಾರೆ. ಗುರುಪುರ ಸೇತುವೆ ನಿರ್ಮಾಣ ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಇನ್ನು ಕಳೆದ 10 ವರಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕೇಂದ್ರದ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿದರು.

Related posts

Leave a Reply

Your email address will not be published. Required fields are marked *