Header Ads
Breaking News

ಕುಳಾಯಿ ಮೀನುಗಾರಿಕಾ ಬಂದರು ಸ್ಥಾಪನೆ ವಿಚಾರ : ಮಾಜಿ ಶಾಸಕ ಮೊಯ್ದಿನ್ ಬಾವಾ ಪ್ರಶ್ನೆ

ನವಮಂಗಳೂರು ಬಂದರಿನ ನಿರ್ಮಾಣಕ್ಕೆ 1964ರಲ್ಲಿ ಮೀನುಗಾರಿಕಾ ಬಂದರನ್ನು ನಿರ್ಮಿಸಿಕೊಡುವ ಆಶ್ವಾಸನೆಯನ್ನು ಸರ್ಕಾರ ನೀಡಿತ್ತು. ಆದರೆ ಕುಳಾಯಿ ಮೀನುಗಾರಿಕಾ ಬಂದರಿನ ಸ್ಥಾಪನೆಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದರೂ ಶಂಕುಸ್ಥಾಪನೆ ನಡೆದರೂ ಟೆಂಡರ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಈ ಎಲ್ಲಾ ಅವಾಂತರಕ್ಕೆ ಎನ್‍ಎಂಪಿಟಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರಣವಲ್ಲವೇ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಪ್ರಶ್ನಿಸಿದರು.ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆಗೆ ವಿಳಂಬ ಯಾಕೆ ಎಂದು ಪ್ರಶ್ನಿಸಿದ ಅವರು, ಕಾಮಗಾರಿಯ ವಿಳಂಬದಿಂದ ಆಗುವ ಹೆಚ್ಚುವರಿ ಯೋಜನಾ ವೆಚ್ಚಕ್ಕೆ ಯಾರು ಜವಾಬ್ದಾರರು. ನೆರೆಯ ಕೇರಳ ರಾಜ್ಯದಲ್ಲಿ ಕೇಂದ್ರ ಸರಕಾರದ ಸಹಾಯಧನದಿಂದ ಒಂದು ವರ್ಷದ ಒಳಗೆ ಮಂಜೇಶ್ವರ ಗ್ರಾಮದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಮಾಡಿ ಉದ್ಘಾಟನೆ ಮಾಡಲು ಸಾಧ್ಯವಾದರೆ ಇಲ್ಲಿ ಯಾಕೆ ಆಗುತ್ತಿಲ್ಲ. ತುರ್ತು ಸಂದರ್ಭ ತೂಫಾನ್ ಆದಾಗ ಮೀನುಗಾರಿಕಾ ಬೋಟಿನವರಿಗೆ ಹಳೆ ಬಂದರಿನ ಒಳಗೆ ಪ್ರವೇಶಿಸಲು ಆಗುವುದಿಲ್ಲ. ಎನ್‍ಎಮ್‍ಪಿಟಿಯಲ್ಲಿ ಒಳಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆದ್ದರಿಂದ ಇನ್ನೆಷ್ಟು ಮೀನುಗಾರರ ಬಲಿಯಾಗಬೇಕಿದೆ. ಕುಳಾಯಿ ಸರ್ವಋತು ಮೀನುಗಾರಿಕಾ ಬಂದರು ನಿರ್ಮಾಣವಾದರೆ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂದರು.

Related posts

Leave a Reply

Your email address will not be published. Required fields are marked *