Header Ads
Header Ads
Header Ads
Breaking News

ಕುಳೂರು-ಸುರತ್ಕಲ್ ಹೆದ್ದಾರಿ ದುರಸ್ಥಿಗೊಳಿಸಿ ಸುರತ್ಕಲ್ ಟೋಲ್‌ಗೇಟ್ ಮುಚ್ಚುವಂತೆ ಆಗ್ರಹ ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಕುಳೂರು-ಸುರತ್ಕಲ್ ಹಾದುಹೋಗುವ ಹೆದ್ದಾರಿಯನ್ನು ದುರಸ್ಥಿಗೊಳಿಸುವಂತೆ ಹಾಗೂ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿರುವ ಸುರತ್ಕಲ್ ಟೋಲ್‌ಗೇಟ್‌ನ್ನು ಮುಚ್ಚುವಂತೆ ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಮಂಗಳೂರಿನ ನಂತೂರಿನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕರಾದ ಮುನೀರ್ ಕಾಟಿಪಳ್ಳ, ದುಬಾರಿ ಸುಂಕ ಪಡೆಯುತ್ತಿರುವ ಕೂಳೂರು- ಪಣಂಬೂರು ಬೈಕಂಪಾಡಿ ಸುರತ್ಕಲ್ ಭಾಗದ ಹೆದ್ದಾರಿಯ ಸಂಪೂರ್ಣವಾಗಿ ಹದಗೆಟ್ಟಿದೆ, ಮಾರಣಾಂತಿಕ ಗುಂಡಿಗಳ ಕಾರಣದಿಂದ ಈ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಸುರತ್ಕಲ್ ಟೋಲ್‌ಗೇಟನ್ನು ಮುಚ್ಚುವಂತೆ ಒತ್ತಾಯಿಸಿದರು.

ವಾಹನಗಳು ಮತ್ತು ಚಾಲಕರಿಗೆ ಅಪಾಯಕಾರಿಯಾಗಿರುವ ಹೆದ್ದಾರಿ ಗುಂಡಿಗಳನ್ನು ದುರಸ್ಥಿಪಡಿಸಿ ಅಕ್ರಮವಾಗಿ ಸುಂಕ ಸಂಗ್ರಹಿಸಿತ್ತಿರುವ ಸುರತ್ಕಲ್ ಟೋಲ್‌ಗೇಟ್ ಅನ್ನು ಮುಚ್ಚಿ ಎಂದು ಇದೇ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು.

Related posts

Leave a Reply