Header Ads
Header Ads
Breaking News

ಕುವೆಂಪು ಜನ್ಮ ದಿನೋತ್ಸವದ ನೆನಪಿನಲ್ಲಿ 18ನೇ ಕುವೆಂಪು ನಾಟಕೋತ್ಸವ

ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ವಿಜೇತ ಜನ್ಮ ದಿನೋತ್ಸವದ ಸವಿನೆನಪಿನಲ್ಲಿ ೧೮ನೇ ಕುವೆಂಪು ನಾಟಕೋತ್ಸವ ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ ಭಂಡಾರ್ಕಾರ್ಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ರಂಗಕಹಳೆ ಬೆಂಗಳೂರು ಐದು ದಿನಗಳ ಕಾಲ ಡಾ. ಎಚ್ ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಆಯೋಜಿಸಿದೆ ಎಂದು ನಾಟಕೋತ್ಸವ ಸಂಚಾಯಕ ಓಹಿಲೇಶ್ ಲಕ್ಷ್ಮಣರವರು ತಿಳಿಸಿದರು.

ಡಿ.25 ರಂದು ಸಂಜೆ ೬ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲ ಉದ್ಘಾಟಿಸಲಿದ್ದು, ಡಾ| ಎಚ್. ಶಾಂತರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ನಾಡೋಜ ಪ್ರೊ| ಹಂ.ಪಂ. ನಾಗರಾಜಯ್ಯ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ನಾಟಕೋತ್ಸವ ಸಮಿತಿಯ ಅಧ್ಯಕ್ಷ ಡಾ| ಎಚ್. ಶಾಂತರಾಂ ಮಾತನಾಡಿ, ಉಡುಪಿ- ದ.ಕ. ಜಿಲ್ಲೆಯಲ್ಲಿಯೇ ಕುವೆಂಪು ನಾಟಕೋತ್ಸವ ನಡೆಯುತ್ತಿರುವುದು ಇದು ಮೊದಲ ಬಾರಿಯಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಸತ್ವ, ಭಾಷಾ ಸೌಂದರ್‍ಯ, ಕನ್ನಡದ ಬಳಕೆಯ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಈ ನಾಟಕೋತ್ಸವ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಾಟಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ| ಎಚ್. ಶಾಂತರಾಂ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಟಕೋತ್ಸವದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಾ| ಎನ್. ಪಿ. ನಾರಾಯಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಪ್ರೊ| ಸುಮಲತಾ ಉಪಸ್ಥಿತರಿದ್ದರು.

Related posts

Leave a Reply