Header Ads
Header Ads
Breaking News

ಕುವೈಟ್‌ನಲ್ಲಿ ಬಂಧಿಯಾದ ಕುಂದಾಪುರದ ಶಂಕರ ಪೂಜಾರಿ. ಯಾರಿಗೋ ಸಹಾಯ ಮಾಡಲು ಹೋಗಿ ಶಿಕ್ಷೆಗೆ ಗುರಿಯಾದ ಅಮಾಯಕ. ಶಂಕರ್ ಪೂಜಾರಿ ಬಿಡಿಸಲು ಸತತ ಪ್ರಯತ್ನ.

ಕುಂದಾಪುರ ತಾಲೂಕಿನ ಬಸ್ರೂರು ಪರಿಸರದ ಕಳಂಜೆ ಎಂಬಲ್ಲಿನ ಶಂಕರ ಪೂಜಾರಿ ಎಂಬವರು ಕುವೈಟ್ ದೇಶದಲ್ಲಿ ಜೈಲುಪಾಲಾದ ಕಳವಳಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮೂರು ತಿಂಗಳ ಹಿಂದೆ ಹತ್ತು ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದ ಶಂಕರ ಪೂಜಾರಿಯವರು ಕುವೈಟ್ ದೇಶಕ್ಕೆ ತನ್ನ ಉದ್ಯೋಗ ನಿಮಿತ್ತ ಮರಳುವಾಗ ಸಹೋದ್ಯೋಗಿಯೋರ್ವರ ವಿನಂತಿ ಮೇರೆಗೆ ಮಾತ್ರೆಗಳ ಪಾರ್ಸೆಲ್ ಕೊಂಡೊಯ್ದಿದ್ದೇ ಅವರು ಜೈಲು ಪಾಲಾಗಲು ಕಾರಣವಾಗಿದೆ. ಕುವೈಟ್ ವಿಮಾನ ನಿಲ್ದಾಣದಲ್ಲಿ ಶಂಕರ ಪೂಜಾರಿಯವರ ವಸ್ತುಗಳನ್ನು ಅಧಿಕಾರಿಗಳು ಪರಿಶೀಲಿಸಿದ ಸಂದರ್ಭ ಅವರು ಮಾತ್ರೆಗಳನ್ನು ತಂದಿರುವುದು ಪತ್ತೆಯಾಗಿದ್ದು, ಶಂಕರ ಪೂಜಾರಿಯವರು ನೀಡಿದ ವಿವರಣೆಗೆ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಕಾನೂನಿನ ಪ್ರಕಾರ ಜೈಲಿಗೆ ಹಾಕಲಾಗಿದೆ.ಶಂಕರ ಪೂಜಾರಿ ಹತ್ತು ದಿನಗಳ ತನ್ನ ರಜೆ ಮುಗಿಸಿ ಕುವೈಟಿಗೆ ಹೋಗುವ ಸಂದರ್ಭ ಅವರ ಸಹೋದ್ಯೋಗಿ ಸಾದಿಕ್ ಎಂಬವರ ವಿನಂತಿ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರಿತ ಚಾಲಕನಾಗಿರುವ ಮುಬಾರಕ್ ಮತ್ತು ಅವರ ಪತ್ನಿ ನೀಡಿದ ಪಾರ್ಸೆಲ್ ಅನ್ನು ಕುವೈಟ್ ನಲ್ಲಿರುವ ಅವರ ಅತ್ತೆ ತಸ್ಲೀಂ ಫಾತಿಮಾ ಎಂಬವರಿಗೆ ನೀಡಲು ತೆಗೆದುಕೊಂಡು ಹೋಗಿದ್ದಾರೆ . ಈ ಸಂದರ್ಭ ಮಾತ್ರೆಗಳನ್ನು ಕೊಂಡೊಯ್ದ ಶಂಕರ ಪೂಜಾರಿ ತನ್ನದಲ್ಲದ ತಪ್ಪಿಗೆ ಜೈಲು ಪಾಲಾಗುವಂತಾಗಿದೆ.

Related posts

Leave a Reply