Header Ads
Header Ads
Breaking News

ಕುಷ್ಠರೋಗ ನಿರ್ಮೂಲನಾ ದಿನಾಚರಣೆ ಜ.30 ರಂದು ಉಚಿತ ಚರ್ಮರೋಗ ತಪಾಸಣಾ ಶಿಬಿರ ಸುರತ್ಕಲ್ ಡಾ.ಜೆ.ಎನ್ ಶೆಟ್ಟಿ ಸೆಂಟರ್‌ನಲ್ಲಿ ಆಯೋಜನೆ

ಹಿಂದ್ ಕುಷ್ಠ್ ನಿವಾರಣಾ ಸಂಘದಿಂದ ಜನವರಿ ೩೦ರಂದು ಉಚಿತ ಚರ್ಮರೋಗ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಸುರತ್ಕಲ್‌ನಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ನರೇಂದ್ರ ಶೆಟ್ಟಿ, ಈವರೆಗೆ ಕುಷ್ಠ ರೋಗ ನಿರ್ಮೂಲನಾ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಜನವರಿ 30 ರಂದು ಕುಷ್ಠರೋಗ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಉಚಿತ ಚರ್ಮರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಸುರತ್ಕಲ್‌ನಲ್ಲಿರುವ ಡಾ. ಜೆ.ಎನ್. ಶೆಟ್ಟಿ ಮೆಮೋರಿಯಲ್ ಫಿಸಿಯೋಥೆರಫಿ ಸೆಂಟರ್‌ನಲ್ಲಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಮಾಧ್ಯಮಗೋಷ್ಠಿಯಲ್ಲಿ ಸಂಯೋಜಕರಾದ ಬಾಲಚಂದ್ರ ಭಟ್, ನರೇಶ್ ಕುಮಾರ್, ನವೀನ್ ಶೆಟ್ಟಿ ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply