Header Ads
Breaking News

ಕುಸಿದು ಬಿದ್ದ ಬಿಕ್ಷುಕ ಪುತ್ತೂರು ಆಸ್ಪತ್ರೆಯಲ್ಲಿ ದಾಖಲು : ವಾರಿಸುದಾರರಿಗಾಗಿ ಪೊಲೀಸ್ ಮನವಿ

ಪುತ್ತೂರು ಮಾರ್ಕೆಟ್ ರಸ್ತೆಯಲ್ಲಿ ಕುಸಿದು ಬಿದ್ದ ಬಿಕ್ಷುಕರೋರ್ವರನ್ನು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ವಾರಿಸುದಾರರಿಗಾಗಿ ಪುತ್ತೂರು ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಎ.26 ರಂದು ಮಾರ್ಕೆಟ್ ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಯನ್ನು 108 ಆಂಬುಲೆನ್ಸ್ ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಪೊಲೀಸರು ವ್ಯಕ್ತಿಯಲ್ಲಿ ಮಾಹಿತಿ ಪಡೆದಾಗ ನಾನು ಬಿಕ್ಷುಕನಾಗಿ ತುಮಕೂರು ನಿವಾಸಿಯಾಗಿದ್ದು ರವಿ ( 50ವ) ಎಂದು ತಿಳಿಸಿದ ಆತ 6 ತಿಂಗಳ ಹಿಂದೆ ಪುತ್ತೂರಿಗೆ ಬಂದು ಭಿಕ್ಷೆ ಬೇಡುತ್ತಿದ್ದೆ. ಇವತ್ತು ಹಸಿವೆಯಿಂದ ತಲೆ ತಿರುಗಿ ಬಿದ್ದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪುತ್ತೂರು ನಗರ  ಪೊಲೀಸರು  ಪ್ರಕರಣ ದಾಖಲಿಸಿ ಕೊಂಡು ರವಿ ಅವರ ವಾರಿಸುದಾರರಿದ್ದಲ್ಲಿ ಪುತ್ತೂರು  ಪೊಲೀಸರ ಠಾಣೆಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *