Header Ads
Header Ads
Breaking News

ಕುಸಿದು ಬಿದ್ದ ಮಚ್ಚಂಪಾಡಿ-ಪಾಪಿಲ ಸಂಪರ್ಕ ಸೇತುವೆ. ವಾರ ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು.

ಮಂಜೇಶ್ವರ: ಮಚಂಪ್ಪಾಡಿ ಹಾಗೂ ಪಾಪಿಲವನ್ನು ಸಂಪರ್ಕಿಸುವ ಸೇತುವೆಯೊಂದು ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಒಂದು ಭಾಗ ಕುಸಿದು ಬಿದ್ದಿತ್ತು. ಆದರೂ ವಾರ ಕಳೆದರೂ ಸೇತುವೆ ದುರಸ್ಥಿಗೆ ಮುಂದಾಗದ ಜನಪ್ರತಿನಿಧಿಗಳ ವಿರುದ್ಧ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಸುಮಾರು 20ವರ್ಷ ಹಳೆಯದಾಗಿರುವ ಸೇತುವೆ ಕುಸಿದಿರುವ ಹಿನ್ನೆಲೆಯಲ್ಲಿ ಶಾಲಾ ಮದ್ರಸ ವಿದ್ಯಾರ್ಥಿಗಳು ಹಾಗೂ ಇತರ ಪ್ರದೇಶವಾಸಿಗಳು ಸಂಕಷ್ಟದಲ್ಲಿ ಸಿಲುಕಿದ್ದರು. ಈ ಸೇತುವೆಯನ್ನು ಸಂಪೂರ್ಣವಾಗಿ ನವೀಕರಿಸಲು ಶಾಸಕರ ನಿಧಿಯಿಂದ ಈಗಾಗಲೇ ಒಂದು ಕೋಟಿ ರೂ. ಮಂಜೂರಾಗಿರುವುದಾಗಿ ಊರವರೇ ಹೇಳುತಿದ್ದಾರೆ.ಆದರೆ ಸಣ್ಣ ಮಟ್ಟದ ದುರಸ್ಥಿಯನ್ನು ನಡೆಸಿದರೆ ತಾತ್ಕಾಲಿಕವಾದರೂ ವಾಹನ ಸಂಚಾರವನ್ನು ಪುನರಾರಂಭಿಸಬಹುದೆಂಬ ಉದ್ದೇಶದಿಂದ ಊರವರು ಪಂ. ಅಧಿಕೃತರಲ್ಲಿ ಹಲವಾರು ಸಲ ವಿನಂತಿಸಿಕೊಂಡಿದ್ದಾರೆ. ಬಳಿಕ ಒಮ್ಮೆ ಕಾರ್ಯದರ್ಶಿಯವರು ಬೇಟಿ ನೀಡಿ ಮೇಲಾಧಿಕಾರಿಗಳಿಂದ ನಮಗೆ ಆದೇಶ ಬರಬೇಕೆಂಬುದಾಗಿ ಹೇಳಿ ಹೋದವರು ಬಳಿಕ ಮೌನವನ್ನು ಪಾಲಿಸಿರುವುದಾಗಿ ಊರವರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಮೌನ ಆಚರಣೆಯನ್ನು ಪ್ರತಿಭಟಿಸಿದ ಸದ್ರಿ ವಾರ್ಡಿನ ಎಸ್ ಡಿ ಪಿ ಐ ಸದಸ್ಯ ಫೈಝಲ್ ಮಚ್ಚಂಪ್ಪಾಡಿ ಎಸ್ ಡಿ ಪಿ ಐ ಕಾರ್ಯಕರ್ತರನ್ನು ಜೊತೆಯಾಗಿಸಿ ಸುಮಾರು ಅಂದಾಜು30,000 ರೂ. ಸ್ವಂತ ಕೈಯಿಂದಲೇ ವ್ಯಹಿಸಿ ಸೇತುವೆಯ ದುರಸ್ಥಿಕಾರ್ಯವನ್ನು ಪೂರ್ತಿಗೊಳಿಸಿ ತಾತ್ಕಾಲಿಕವಾದ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಊರವರ ಪ್ರಶಂಶೆಗೆ ಪಾತ್ರರಾಗಿದ್ದಾರೆ.

Related posts

Leave a Reply