Breaking News

ಕುಸಿಯುತ್ತಿರುವ ಕೊಳವೆ ಬಾವಿಯ ಸುತ್ತಲಿನ ಮಣ್ಣು, ಆತಂಕದಲ್ಲಿ ವಿಟ್ಲ ಪರಿಸರದ ಜನತೆ

ರಾಜ್ಯದಾದ್ಯಂತ ಕೊಳವೆ ಬಾವಿಗೆ ಬಿದ್ದು ಪುಟ್ಟ ಕಂದಮ್ಮಗಳ ಸಾವು ಸಂಭವಿಸಿದ ಘಟನೆಗಳನ್ನು ಕೇಳಿದ್ದೀರಿ. ಇಂತಹ ಅನಾಹುತಗಳನ್ನು ತಪ್ಪಿಸುವ ಪ್ರಯುಕ್ತ ರಾಜ್ಯದಾದ್ಯಂತ ಎಲ್ಲಿಯೂ ಕೊಳವೆ ಬಾವಿ ಕೊರೆದರೂ ಅವುಗಳನ್ನು ಸಮರ್ಪಕ ರೀತಿಯಲ್ಲಿ ಮುಚ್ಚಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಇದೀಗ ವಿಟ್ಲದಲ್ಲೊಂದು ಕೊಳವೆ ಬಾವಿಯ ಸುತ್ತಲಿನ ಮಣ್ಣುಗಳು ಕುಸಿಯುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಟ್ಲದಲ್ಲಿ ವಿಪರೀತವಾಗಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಅವುಗಳನ್ನು ಹೋಗಲಾಡಿಸಲು ಜಿಲ್ಲಾಡಳಿತ ಹಾಗೂ ಪಟ್ಟಣ ಪಂಚಾಯತ್ ಮುಂದಾಗಿತ್ತು. ಇದರಿಂದಲೇ ವಿಟ್ಲದಾದ್ಯಂತ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಬಹುತೇಕ ಕೊಳವಿ ಬಾವಿಗಳಲ್ಲಿ ನೀರು ಸಿಗದಿದ್ದಾಗ ಮುಚ್ಚಲಾಗಿತ್ತು. ವಿಟ್ಲದ ಮೇಗಿನಪೇಟೆ ಜನತಾ ಕಾಲೋನಿ ಎಂಬಲ್ಲಿಯೂ ಕೊಳವೆ ಬಾವಿ ಕೊರೆಸಲಾಗಿತ್ತು. ಇಲ್ಲಿ ನೀರು ಸಿಗದಿದ್ದಾಗ ಬೋರ್‌ವೆಲ್ ಸಿಬ್ಬಂದಿಗಳು ಅವುಗಳಿಗೆ ಮಣ್ಣು ಹಾಕಿ ಮುಚ್ಚದೇ ಚೇಸಿಂಗ್ ಪೈಪಿಗೆ ಮುಚ್ಚಳ ಹಾಕಿ ತಮ್ಮ ಪಾಡಿಗೆ ತೆರಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಳವೆ ಬಾವಿಯ ಸುತ್ತಲಿನ ಮಣ್ಣುಗಳು ಕುಸಿಯುತ್ತಿದೆ. ಇದರಿಂದಾಗಿ ಕೊಳವೆ ಬಾವಿಯಲ್ಲಿ ಆಳಗಳು ಎದ್ದು ಕಾಣುತ್ತಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.

Related posts

Leave a Reply