Header Ads
Header Ads
Header Ads
Header Ads
Header Ads
Header Ads
Breaking News

ಕೂಲಿ ಕಾರ್ಮಿಕನ ಮೃತದೇಹ ಪತ್ತೆ : ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೂಲಿ ಕಾರ್ಮಿಕನೋರ್ವನ ಮೃತದೇಹವು ಪುತ್ತೂರು ತಾಲೂಕಿನ ಪಳ್ಳಿತ್ತಡ್ಕ ದರ್ಗಾ ಶರೀಫ್ ಬಳಿಯ ಹೊಳೆ ದಡದಲ್ಲಿ ಪತ್ತೆಯಾಗಿದೆ. ಒಳಮೊಗ್ರು ಗ್ರಾಮದ ಅಜಲಡ್ಕ ನಿವಾಸಿ ಅರ್ತಿಮೂಲೆ ಪುರಂದರ ಯಾನೆ ಪಕೀರಪ್ಪ ನಾಯ್ಕ (50) ಅವರು ಕಳೆದ (ಸೆ.7) ಶನಿವಾರದಿಂದ ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಿದ ವೇಳೆ ಅಜಲಡ್ಕದಿಂದ ಸುಮಾರು 1ಕಿಮೀ ದೂರದಲ್ಲಿರುವ ನಿಡ್ಪಳ್ಳಿ ಗ್ರಾಮದ ಅನಾಜೆ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಅವರ ಕೊಡೆ ಮತ್ತು ಚಪ್ಪಲಿಗಳು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅವರು ತೆಂಗಿನಕಾಯಿ ಹಿಡಯಲೆಂದು ಹೋದವರು ಹೊಳೆ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿತ್ತು. ಪುತ್ತೂರು ಮತ್ತು ಸುಳ್ಯ ಅಗ್ನಿಶಾಮಕ ದಳವರು ಹಾಗೂ ಮಂಗಳೂರಿನ ಎನ್‍ಡಿಆರ್‍ಎಫ್ ತಂಡ ಬುಧವಾರ ತನಕ ಶೋಧನಾ ಕಾರ್ಯಾಚರಣೆ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಿಗ್ಗೆ ಮೃತದೇಹ ಘಟನಾ ಸ್ಥಳದಿಂದ ಸುಮಾರು 5ಕಿಮೀ ದೂರದಲ್ಲಿರುವ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ಬಳಿ ಹೊಳೆ ದಡದಲ್ಲಿರುವ ಮರಳಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದಲ್ಲಿದ್ದ ಒಳ ಉಡುಪು ಹಾಗೂ ಅಂಗಿಯ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *