Header Ads
Breaking News

ಕೂಳೂರು ಹಳೆಸೇತುವೆ ದುರಸ್ತಿ ಕಾಮಗಾರಿಗೆ ಚಾಲನೆ ಹಿನ್ನೆಲೆ : ಗಂಟೆಗಟ್ಟಲೆ ಹೆದ್ದಾರಿಯಲ್ಲಿ ಪರದಾಡಿದ ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕೂಳೂರು ಹಳೆ ಕಮಾನು ಸೇತುವೆಯ ದುರಸ್ತಿಯ ಹಿನ್ನೆಲೆಯಲ್ಲಿ ಮಾಡಿರುವ ಸಂಚಾರ ಬದಲಾವಣೆಯಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಸಮಸ್ಯೆ ಉಂಟಾಗಿದೆ. ಇಂದು ಬೆಳಗ್ಗೆಯಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಹಳೆ ಕಮಾನು ಸೇತುವೆಯ ದುರಸ್ತಿಯ ಹಿನ್ನೆಲೆಯಲ್ಲಿ ಕೂಳೂರು ಹೊಸ ಸೇತುವೆಯಲ್ಲೇ ವಾಹನಗಳ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ವಾಹನ ದಟ್ಟಣೆಗೆ ಕಾರಣವಾಗಿದೆ. ಇದರಿಂದ ವಾಹನಗಳ ಭಾರೀ ಸಾಲು ರಸ್ತೆಯಲ್ಲಿ ಕಂಡುಬಂದಿದೆ. ಹಳೆ ಸೇತುವೆಯ ಅಡಿಭಾಗದ ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ದಂಡಾಧಿಕಾರಿಯು ಹಳೆ ಕಮಾನು ಸೇತುವೆಯಲ್ಲಿ ಮಾ.16ರಿಂದ ಅನ್ವಯವಾಗುವಂತೆ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ. ಅದರಂತೆ ಕೂಳೂರು ಹೊಸ ಸೇತುವೆಯಲ್ಲೇ ವಾಹನಗಳ ದ್ವಿಮುಖ ಸಂಚಾರ ನಡೆಯಲಿದೆ. ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನ ಹಾಗೂ ನಿತ್ಯ ಸಂಚರಿಸುವ ಬಸ್‍ಗಳು ಮತ್ತು ಆರು ಚಕ್ರದ ಸರಕು ಸಾಗಾಟದ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ ಸಂಚಾರ ಬದಲಾವಣೆ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ.

Related posts

Leave a Reply

Your email address will not be published. Required fields are marked *