Header Ads
Header Ads
Breaking News

ಕೃಷಿಕನಿಗೆ ಬೇಕಾಗಿರುವುದು ತಾನು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯೇ ಹೊರತು ಸಾಲಮನ್ನಾವಲ್ಲ : ಹೆಚ್.ಆರ್. ಬಸವರಾಜಪ್ಪ ಹೇಳಿಕೆ

ಕೃಷಿಕನಿಗೆ ಬೇಕಾಗಿರುವುದು ತಾನು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆಯೇ ಹೊರತು ಸಾಲಮನ್ನಾವಲ್ಲ ಎಂದು ರೈತಸಂಘ, ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಹೆಚ್.ಆರ್. ಬಸವರಾಜಪ್ಪ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕೃಷಿಕ ಬೆಳೆದ ಬೆಳೆದ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಕಾರಣ ಕೃಷಿಕ ಸಂಕಷ್ಟಕ್ಕೀಡಾಗುವ ಪರಿಸ್ಥಿತಿಯಲ್ಲಿದ್ದಾನೆ. ಎಲ್ಲಾ ಪಕ್ಷಗಳು ಚುನಾವಣೆ ಬರುವ ಸಂದರ್ಭದಲ್ಲಿ ರೈತನ ಸಾಲಮನ್ನಾ ಮಾಡುತ್ತೇವೆ ಎನ್ನುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ರೈತನನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರೂ, ಇಂದಿನವರೆಗೂ ರೈತನಿಗೆ ಇದರ ಪ್ರಯೋಜನ ದೊರೆತಿಲ್ಲ. ಎಲ್ಲಾ ಸರಕಾರಗಳು ಕೃಷಿಕನಿಗೆ ಸಾಲಮನ್ನಾ ಯೋಜನೆಯನ್ನು ಘೋಷಿಸುವ ಬದಲು ಕೃಷಿಕ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಲಿ, ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದಲ್ಲಿ ರೈತ ಯಾವತ್ತೂ ಸಾಲಮನ್ನಾಕ್ಕಾಗಿ ಸರಕಾರದ ಮುಂದೆ ಮಂಡಿಯೂರುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ವರದಿ: ಪ್ರವೀಣ್ ಪುತ್ತೂರು

Related posts

Leave a Reply