Header Ads
Header Ads
Header Ads
Breaking News

ಕೃಷಿಯನ್ನೇ ವೃತ್ತಿಯನ್ನಾಗಿಸಿದ ಕೃಷಿಕರು…ಸಾವಯುವ ಬಸಳೆ ಕೃಷಿಯಲ್ಲಿ ತೊಡಗಿರುವ ದಂಪತಿ

ಕೃಷಿಯನ್ನೇ ನಂಬಿಕೊಂಡು ಬದುಕು ಕಂಡುಕೊಂಡವರು ಅದೇಷ್ಟೋ ಮಂದಿಯಿದ್ದಾರೆ. ಭತ್ತದ ಕೃಷಿ, ತರಕಾರಿ ಬೆಳೆ, ಹೈನುಗಾರಿಕೆ ನಡೆಸುತ್ತಾ ತಮ್ಮ ಬದುಕಿನ ಬಂಡಿಯನ್ನು ಸಾಗಿಸುವ ಕೃಷಿಕರೂ ಇದ್ದಾರೆ. ಕೃಷಿಯನ್ನು ಲಾಭಾದಾಯಕ ವೃತ್ತಿಯನ್ನಾಗಿಸಿಕೊಂಡು ತಮ್ಮ ಸಂಸಾರದ ನೊಗವನ್ನು ಸಾಗಿಸುವ ಚೇಳೈರು ಕೆಳಗಿನ ಮನೆಯ ಸಣ್ಣ ಇಳುವರಿದಾರರಾದ ತಿಮ್ಮಪ್ಪ ವಿದ್ಯಾ ಶೆಟ್ಟಿ ದಂಪತಿ ಹಲವು ಕೃಷಿಕರಿಗೆ ಮಾದರಿಯಾಗಿದ್ದಾರೆ. ದಂಪತಿಗಳಿಬ್ಬರೂ ಕೂಡಾ ತಮ್ಮ ಸ್ವಂತ ಜಾಗದಲ್ಲೇ ಸಾವಯವ ಬಸಳೆ ಕೃಷಿಯನ್ನು ನಡೆಸಿ ಕೃಷಿ ಲಾಭದಾಯಕ ವೃತ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

 ಚೇಳೈರು ಕೆಳಗಿನ ಮನೆಯ ಜಾಗದಲ್ಲಿ ಪಿತ್ರಾರ್ಜಿತವಾಗಿ ಬಂದ 24 ಸೆ0ಟ್ಸ್ ಜಮೀನನಲ್ಲಿ ಸಾವಯವ ಬಸಳೆ ಕೃಷಿ, ತರಕಾರಿ ಬೆಳೆಗಳಾದ ಬೆಂಡೆ, ಬದನೆ, ಹೀರೆಕಾಯಿ ಸೋರೆಕಾಯಿ ಹಾಗೂ ಹೈನುಗಾರಿಕೆಯನ್ನು ನಡೆಸುತ್ತಾ ದಂಪತಿಗಳು ಜೀವನ ಸಾಗಿಸುತ್ತಿದ್ದಾರೆ. ಪತಿಯ 24 ಸೆ0ಟ್ಸ್ ಖಾಲಿ ಜಾಗವನ್ನು ಕಂಡು ಬಸಳೆ ಕೃಷಿಯನ್ನು ಮಾಡುವ ಯೋಚನೆಯನ್ನು ಬಿತ್ತಿದ ವಿದ್ಯಾ ಶೆಟ್ಟಿ ಅವರು ಬಳಿಕ ಕೃಷಿಯಲ್ಲಿ ಹಿಂದಿರುಗಿ ನೋಡಿದವರೇ ಅಲ್ಲ. ಪತಿ ತಿಮ್ಮಪ್ಪ ಶೆಟ್ಟಿಯವರ ಸಹಕಾರದೊಂದಿಗೆ ಬಸಳೆ ಕೃಷಿಯನ್ನು ನಡೆಸುತ್ತಾ ವಾರ್ಷಿಕ 2 ರಿಂದ 3 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ. ಮನೆಯ ಸುತ್ತೆಲ್ಲಾ ಕಣ್ಣು ಹಾಯಿಸಿದರೂ ಹಸಿರು ಬಣ್ಣದ ಬಸಳೆ ಚಪ್ಪರವೇ ಕಾಣಸಿಗುತ್ತಿದ್ದು ಪ್ರಸ್ತುತ ಬದನೆ, ಹೀರೆಕಾಯಿ, ಬೆಂಡೆಕಾಯಿಯ ಬೆಳೆಯನ್ನು ನಡೆಸುತ್ತಿದ್ದಾರೆ.

 ತಿಮ್ಮಪ್ಪ ಶೆಟ್ಟಿ ಅವರು ರಿಕ್ಷಾ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು ಬಳಿಕ ಪತ್ನಿ ವಿದ್ಯಾ ಶೆಟ್ಟಿ ಅವರ ಕೃಷಿ ಕಾಯಕಕ್ಕೆ ತಾನೂ ಸಾಥ್ ನೀಡಿ ರಿಕ್ಷಾವನ್ನು ಖಾಸಗಿ ಮಾಡಿಸಿ ಬೆಳೆದ ಬಸಳೆಯನ್ನು ಮಾರ್ಕೆಟ್, ಅಂಗಡಿಗಳಿಗೆ ಒಯ್ಯಲು ಬಳಸುತ್ತಿದ್ದಾರೆ. ದಿನಕ್ಕೆ ಏನಿಲ್ಲವಾದರೂ 100 ರಿಂದ 120 ರವರೆಗೂ ಬಸಳೆ ಕಟ್ಟಿನ ಆರ್ಡರ್ ದೊರೆತು ಅದನ್ನು ಮಾರುತ್ತಾರೆ. ಒಂದು ಕಟ್ಟಿನ ಬಸಳೆಗೆ 40 ರೂ ಪಡೆಯುತ್ತಾರೆ. ತಮ್ಮ ಜಮೀನಲ್ಲದೇ ಬೇರೆಯವರ ಜಾಮೀನನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲೂ ಕೂಡಾ ಸಾವಯವ ಬಸಳೆ ಕೃಷಿ ನಡೆಸಿ ತಮ್ಮ ಕೃಷಿಪ್ರೇಮವನ್ನು ತೋರುತ್ತಿದ್ದಾರೆ ತಿಮ್ಮಪ್ಪ ವಿದ್ಯಾ ಶೆಟ್ಟಿ ದಂಪತಿಗಳು.  ಸಾವಯವ ಬಸಳೆಯ ಆರೈಕೆಗಾಗಿ ಹೈನುಗಾರಿಕೆಯ ಸಗಣಿ ಗಂಜಲವನ್ನು ಉಪಯೋಗಿಸುತ್ತಾರೆ. ದಿನಾಲೂ ತಪ್ಪದೇ ಬೆಳಗ್ಗೆ ಇಲ್ಲವಾದಲ್ಲಿ ಸಂಜೆ ನೀರು ಉಣಿಸುವಿಕೆ, ಬಸಳೆ ಬಳ್ಳಿ ಹಬ್ಬಲು ಸೂಕ್ತ ಚಪ್ಪರ, ಬಸಳೆ ಬುಡದಲ್ಲಿ ಯಾವುದೇ ಗಿಡಗ0ಟಿ ಬೆಳೆಯದ ಹಾಗೇ ನೋಡಿಕೊಳ್ಳುವುದರಿಂದ ಒಳ್ಳೆಯ ಇಳುವರಿ ಪಡೆದ ಸಾವಯವ ಬಸಳೆಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ವರ್ಷವಾದ ನಂತರ ಬಸಳೆಯ ಮಣ್ಣನ್ನು ಅಡಿಮೇಲು ಮಾಡಿ ಹೊತ್ತಿಸುವುದರಿಂದ ಮಣ್ಣಿನ ಫಲವತ್ತತೆ ಇನ್ನೂ ಹೆಚ್ಚುತ್ತದೆ. ಮಳೆಗಾಲ ಜೂನ್, ಜುಲೈ, ಆಗೋಸ್ಟ್ ತಿಂಗಳಲ್ಲಿ ಬಸಳೆ ಕೃಷಿ ಅಸಾಧ್ಯ. 1 ವರೆ ತಿಂಗಳಲ್ಲಿ ಸೊಂಪಾಗಿ ಬೆಳೆದ ಬಸಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬಹುದು. ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ವಿಮುಖರಾಗುವವರೇ ಹೆಚ್ಚಳ ಅಂತದ್ರಲ್ಲಿ ತಿಮ್ಮಪ್ಪ ವಿದ್ಯಾ ಶೆಟ್ಟಿ ದಂಪತಿಯವರ ಈ ಕಾರ್ಯವನ್ನು ಮೆಚ್ಚಲೇಬೇಕು. ತಮ್ಮ ಸ್ವಂತ ಜಾಗದಲ್ಲಿ ಕೃಷಿ ಬದುಕನ್ನು ಕಟ್ಟಿಕೊಂದು ಬದುಕುತ್ತಿರುವ ಇವರು ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

 

Related posts

Leave a Reply

Your email address will not be published. Required fields are marked *