Header Ads
Header Ads
Header Ads
Breaking News

ಕೃಷಿಸಿರಿಗೆ ಹಸಿರು, ಕಲಾತ್ಮಕ ಸ್ವಾಗತ ಇಂದಿನಿಂದ ಆಳ್ವಾಸ್‌ನಲ್ಲಿ ಕೃಷಿ ಸಿರಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಆಳ್ವಾಸ್ ಕೃಷಿಸಿರಿಯು ಈ ಬಾರಿ ವೈವಿದ್ಯತೆಯಿಂದ ಕೂಡಿದೆ. ವಿಶೇಷ ಆಕರ್ಷಣೆಗಳು ಕೃಷಿಮೇಳಕ್ಕೆ ಹೊಸ ರೂಪು ನೀಡಲು ತಯಾರಾಗುತ್ತಿದೆ.

ಸುಮಾರು ಎರಡು ಎಕರೆಗಳಲ್ಲಿ ಬೆಳಸಲಾಗಿರುವ ತರಕಾರಿ ತೋಟ, ಬೆಟ್ಜಪ್ಪ ಗೊಂಬೆ, ವಿವಿಧ ಮುಖವಾಡಗಳು ಇದಿರು ನೋಡುತ್ತಿದೆ. ಹಿಂದೆ ಆಳ್ವಾಸ್ ಕೃಷಿಸಿರಿಯು ಕೃಷಿ ವಿಚಾರ ಸಂಕಿರಣ, ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನ ಪ್ರಾತ್ಯಕ್ಷಿಕೆ ಕಂಡು ಬಂದರೆ ಈ ಬಾರಿ ಎರಡು ಎಕರೆಯ ಸಮೃದ್ಧ ತರಕಾರಿ ಬೆಳೆಗಳು, ಬೆದರುಗೊಂಬೆಗಳು ವಿಶೇಷ ಆಕರ್ಷಣೆ ಎನ್ನಿಸಿಕೊಳ್ಳಲಿದೆ.

ಕೃಷಿಸಿರಿಯ ಸಭಾ ಕಾರ್ಯಕ್ರಮ ನಡೆಯುವ ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣ ವೈವಿದ್ಯತೆ ನೀಡುವುದಕ್ಕೆ ಸಜ್ಜಗೊಳ್ಳುತ್ತಿದೆ. ತರಕಾರಿ ಗಿಡಗಳ ಮಧ್ಯೆ ಅಲ್ಲಲ್ಲಿ ಬೆದರುಗೊಂಬೆಗಳನ್ನು ಇರಿಸಲಾಗಿದೆ. ತೋಟದ ಎದುರು ಭಾಗದಲ್ಲಿ ಮುಖವಾಡ ಪತಾಕೆಗಳನ್ನು ಇರಿಸಲಾಗುತ್ತಿದೆ. ಥರ್ಮಕೋಲಿನಿಂದ ರಚಿಸಲಾದ ಚಿಟ್ಟೆ, ಪಕ್ಷಿಗಳ ಆಕೃತಿಗಳನ್ನು ತರಕಾರಿಗಳ ಜೊತೆ ನೇತಾಡಿಸಲಾಗಿದೆ. ಸಭಾ ಕಾರ್ಯಕ್ರಮ ನಡೆಯುವ ವೇದಿಕೆ ನಿರ್ಮಾಣ ಕೆಲಸ ಕೂಡ ಬಹುತೇಕ ಪೂರ್ಣಗೊಂಡಿದೆ. ವೇದಿಕೆ ಎದುರು ಪುಷ್ಪ ಪ್ರದರ್ಶನ, ಪ್ರಾಣಿ ಪಕ್ಷಿಗಳ ಆಕೃತಿಗಳಲ್ಲಿ ಗಿಡಗಳನ್ನು ಕತ್ತರಿಸಿರುವುದು ಗಮನಸೆಳೆಯುವಂತಿದೆ. ಮತ್ತೊಂದೆಡೆ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳ ವ್ಯವಸ್ಥೆಗಳು ಬಹುತೇಕ ಪೂರ್ಣಗೊಂಡಿದೆ.

ಕಳೆದ ವರ್ಷದಂತೆ ಶ್ವಾನ ಪ್ರದರ್ಶನ ಹಾಗೂ ಮೀನಿನ ಅಕ್ವೇರಿಯಂಗಳ ವ್ಯವಸ್ಥೆ ಮಾಡಲಾಗಿದೆ. ಶ್ವಾನ ಪ್ರದರ್ಶನ ಈ ಬಾರಿ ಕಳೆದ ವರ್ಷಕ್ಕಿಂತ ತುಸು ಭಿನ್ನವಾಗಿ ಆಯೋಜಿಸಲಾಗಿದೆ. ಶ್ವಾನ, ಶ್ವಾನಮರಿ, ಶ್ವಾನ ಪ್ರಾಮಾಣಿಕತೆ ಹಾಗೂ ಶ್ವಾನ ಸೌಂದರ್ಯ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಬೆಕ್ಕುಗಳ ಸೌಂದರ್ಯ ಪ್ರದರ್ಶನವನ್ನು ಕೃಷಿಸಿರಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಡಾ.ಅಬ್ದುಲ್ ಕಲಾಂ ಮೆಮೋರಿಯಲ್ ಪಿ.ಜಿ ವಠಾರದಲ್ಲಿ ಡಿಸೆಂಬರ್ 2 ರಂದು ಮಧ್ಯಾಹ್ನ ೨ಗಂಟೆಯಿಂದ ೪ ಗಂಟೆಯವರೆಗೆ ಬೆಕ್ಕು ಹಾಗೂ ಡಿ.3 ರಂದು 2 ಗಂಟೆಯಿಂದ ೬ಗಂಟೆಯವರೆಗೆ ಶ್ವಾನ ಪ್ರದರ್ಶನ ನಡೆಯಲಿದೆ. ಶಿವರಾಮ ಕಾರಂತ ವೇದಿಕೆಯ ಬಳಿ 60 ಕ್ಕೂ ಅಧಿಕ ಬೃಹತ್ ಗಾತ್ರದ ಅಕ್ವೇರಿಯಂಗಳಲ್ಲಿ ಮತ್ಸ್ಯ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಕೃಷಿಸಿರಿಯ ನಾಲ್ಕೂ ದಿನಗಳು ಕಾಣಸಿಗುತ್ತದೆ.

Related posts

Leave a Reply