Header Ads
Breaking News

ಕೃಷಿ ಕ್ಷೇತ್ರದ ಮೇಲೂ ತನ್ನ ಕರಾಳ ಪರಿಣಾಮ ಬೀರಿದ ಕೊರೊನಾ : ಪಾತಾಳಕ್ಕೆ ಇಳಿದ ಕಲ್ಲಂಗಡಿ ಬೆಲೆ

ಜಾಗತಿಕ ಮಟ್ಟದಲ್ಲಿ ಸಾಕಷ್ಟು ಭಯ ಹುಟ್ಟಿಸಿ ಸಾವು ನೋವಿಗೆ ಕಾರಣವಾಗಿರುವ ಕರೋನಾ ಈಗ ಕೃಷಿ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ. ಕರೋನಾ ಎಫೆಕ್ಟ್ ಮತ್ತು ಕರೋನಾ ಎಮರ್ಜೆನ್ಸಿ ಹಿನ್ನಲೆಯಲ್ಲಿ ಕಲ್ಲಂಗಡಿ ಹಣ್ಣಿನ ಮೇಲೆ ಪಾತಾಳಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳ ಕಲ್ಲಂಗಡಿ ಹಣ್ಣಿನ ದರಕ್ಕೆ ಹೋಲಿಸಿದರೆ ಈ ವರ್ಷ ಅದರ ಅರ್ಧದಷ್ಟು ಕೂಡ ಬೆಲೆ ಇಲ್ಲದೆ ಇರುವುದು ಕಲ್ಲಂಗಡಿ ಕೃಷಿಕರಿಗೆ ಆತಂಕ ಹೆಚ್ಚು ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ಕೆಜಿಯೊಂದಕ್ಕೆ 14, 15 ರೂಪಾಯಿ ದರದಲ್ಲಿ ಕೃಷಿಕರಿಂದ ಕಲ್ಲಂಗಡಿ ಖರೀದಿಯಾಗುತ್ತಿತ್ತು. ಆದರೆ ಕರೋನಾ ಎಫೆಕ್ಟ್‍ನಿಂದಾಗಿ ಕಲ್ಲಂಗಡಿಯ ಸದ್ಯ 7, 6, 5ವರೆಗೆ ರೂಪಾಯಿ ಕಿಲೋ ದರದಲ್ಲಿ ಕೃಷಿಕರಿಂದ ಖರೀದಿಸಲಾಗುತ್ತಿದೆ. ಈ ಬೇಸಿಗೆ ಸಮಯದಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ಹಣ್ಣು ಕಲ್ಲಂಗಡಿಯಾದರು ಕೂಡ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮೊದಲ ಟ್ರಿಪ್ ಕೊಂಡು ಹೋದ ಹಣ್ಣುಗಳು ಖಾಲಿಯಾಗದ ಹಿನ್ನಲೆಯಲ್ಲಿ ಬೆಳೆದ ಕಲ್ಲಂಗಡಿ ಗದ್ದೆಯಲ್ಲೇ ಉಳಿದಿದೆ. ಈ ವರ್ಷ ಉತ್ತಮ ಫಸಲು ಬಂದರು ಕೂಡ ಮಾರುಕಟ್ಟೆಯಲ್ಲಿ ಕರೋನಾ ಭೀತಿಯಿಂದಾಗಿ ಕಲ್ಲಂಗಡಿ ಬೆಳೆಗೆ ಸಮಸ್ಯೆಯಾಗಿದೆ. ಸದ್ಯ ಕೇರಳಕ್ಕೆ ಕೋಟದ ಪ್ರಗತಿಪರ ಕೃಷಿಕ ಭೋಜ ಪೂಜಾರಿ ಕಲ್ಲಂಗಡಿ ಮಾರಾಟ ಮಾಡಿದ್ದಾರೆ, ಆದರೆ ಎರಡನೇ ಕಟಾವು ಕೇಳುವವರಿಲ್ಲದಂತಾಗಿದೆ ಎನ್ನುತ್ತಿದ್ದಾರೆ.

Related posts

Leave a Reply

Your email address will not be published. Required fields are marked *