Header Ads
Breaking News

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್ ಹಿನ್ನೆಲೆ : ಪುತ್ತೂರು ನಗರ ಹಾಗೂ ಗ್ರಾಮಂತರ ಭಾಗದಲ್ಲಿ ನೀರಸ ಪ್ರತಿಕ್ರಿಯೆ

ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ನೀತಿಗಳನ್ನೂ ವಿರೋಧಿಸಿ ದೇಶದ 38 ರೈತ ಸಂಘಟನೆಗಳು ದೇಶಾದ್ಯಂತ ಕರೆ ಕೊಟ್ಟಿರುವ ಬಂದ್ ಗೆ ಪುತ್ತೂರು ನಗರ ಹಾಗೂ ಗ್ರಾಮಂತರ ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೇಸ್ ಸೇರಿದಂತೆ ದೇಶದ ಬಹುತೇಕ ವಿಪಕ್ಷಗಳು ಈ ಬಂದ್‍ಗೆ ಬೆಂಬಲ ಸೂಚಿಸಿದ್ದವು.ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಕನಿಷ್ಟ ಬೆಂಬಲ ಬೆಲೆಯನ್ನು ಇಲ್ಲದಂತೆ ಮಾಡಿವೆ ಎಂದು ಆರೋಪಿಸಿ ಹರ್ಯಾಣ ಹಾಗೂ ಪಂಜಾಬ್ ರಾಜ್ಯದ ರೈತರುಗಳು ಕಳೆದ 11 ದಿನಗಳಿಂದ ಪ್ರತಿಭಟನೆಯಲ್ಲಿ ನಿರತವಾಗಿವೆ ಈ ಕಾಯ್ದೆ ಮಂಡಿ ವ್ಯವಸ್ಥೆಯನ್ನು ಇಲ್ಲದಂತೆ ಮಾಡಿ ,ರೈತರು ಕಾರ್ಪೋರೆಟ್ ಕಂಪೆನಿಗಳ ಮರ್ಜಿಗೆ ಒಳಗಾಗುವಂತೆ ಮಾಡಲಿವೆ ಎನ್ನುವುದು ರೈತ ಸಂಘಟನೆಗಳ ಅಕ್ರೋಶ.ಪುತ್ತೂರು ನಗರದಲ್ಲಿ ವಾಹನಗಳ ಓಡಾಟ ಹಿಂದಿನಂತೆ ಕಂಡು ಬಂದಿದೆ. ಸರಕಾರಿ ಹಾಗೂ ಖಾಸಗಿ ವಾಹನಗಳು ಓಡಾಟ ನಡೆಸುತ್ತಿವೆ. ಅಟೋ ರಿಕ್ಷಾ ಓಡಾಟಗಳು ಭಾದಿತವಾಗಿಲ್ಲ. ಸರಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿತ್ತಿದು, ಸಿಬಂದಿಗಳ ಹಾಜರಾತಿಯಲ್ಲೂ ಕೊರತೆ ಕಂಡು ಬಂದಿಲ್ಲ. ಬಹುತೇಕ ಅಂಗಡಿ ಮುಗ್ಗಟ್ಟು, ಹೋಟೆಲ್ ಇತ್ಯಾದಿ ಎಂದಿನಂತೆ ಕಾರ್ಯಾಚರಿಸುತ್ತಿದೆ.

Related posts

Leave a Reply

Your email address will not be published. Required fields are marked *