Header Ads
Header Ads
Header Ads
Breaking News

ಕೃಷಿ ರಂಗದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಜೈನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ

ಮೂಡುಬಿದಿರೆ: ಇಲ್ಲಿನ ಕೋ-ಓಪರೇಟಿವ್ ಸರ್ವಿಸ್ ಬ್ಯಾಂಕ್‌ನಲ್ಲಿ ಸಹಕಾರ ಸಪ್ತಾಹದಂಗವಾಗಿ ವಾರ ಕಾಲ ನಡೆದ ಸಪ್ತ ಸಂಧ್ಯಾ-ಚಿಂತನ ಸರಣಿ ಕಾರ್ಯಕ್ರಮದಲ್ಲಿ ‘ಕೃಷಿ ಮತ್ತು ಯುವಜನತೆ’ ಕುರಿತು ಜೈನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡಿದರು.

ಕೃಷಿರಂಗದಲ್ಲಿ ಈಗ ನಡೆಯುತ್ತಿರುವ ಆವಿಷ್ಕಾರಗಳು, ಲಭ್ಯವಿರುವ ಯಂತ್ರೋಪಕರಣಗಳನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಕೃಷಿರಂಗದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ ಎಂಬುದನ್ನು ನಮ್ಮ ಯುವಜನರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.

ಮೂಡಬಿದಿರೆ ಪೊಲೀಸ್ ಇನ್ಸ್‌ಫೆಕ್ಟರ್ ರಾಮಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ, ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರು ಬ್ಯಾಂಕಿನ ಬೆಳವಣಿಗೆಗಳಿಗೆ ಕಾರಣರಾದ ನಿರ್ದೇಶಕ ಮಂಡಳಿ, ಸದಸ್ಯರು, ಸಿಬಂದಿ ವಿಶೇಷವಾಗಿ ಸಿ‌ಇ‌ಓ ಅವರ ಸಹಕಾರವನ್ನು ಸ್ಮರಿಸಿಕೊಂಡರು

ವರದಿ: ಪ್ರೇಮಶ್ರೀ ಮೂಡಬಿದಿರೆ

Related posts

Leave a Reply