Header Ads
Header Ads
Breaking News

ಕೃಷ್ಣನ ನಗರಿಯಲ್ಲಿ ಮೊಸರು ಕುಡಿಕೆ ಸಂಭ್ರಮ. ರಥಬೀದಿಯಲ್ಲಿ ಭಕ್ತ ಜನ ಸಾಗರ. ಆಲಾರೆ ತಂಡದಿಂದ ಮಾನವ ಪಿರಮಿಡ್.

ಪೊಡವಿಗೊಡೆಯನ ನಾಡು, ಕೃಷ್ಣ ನಗರಿ ಉಡುಪಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ನಡೆಯಿತು. ಮಠದಲ್ಲಿ ಇಂದು ಕೃಷ್ಣ ಲೀಲೋತ್ಸವ ನಡೆಯುವ ಮೂಲಕ ಭಕ್ತರು ಕೃಷ್ಣನ ಹುಟ್ಟು ಹಬ್ಬವನ್ನು ಜನ ಕಣ್ತುಂಬಿಕೊಂಡರು.ಕೃಷ್ಣನ ಮಣ್ಣಿನ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ಸ್ವರ್ಣ ರಥದಲ್ಲಿ ಇಟ್ಟು ಪೂಜೆ ಮಾಡಲಾಯಿತು. ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು.

ನಂತರ ಮಠದ ಗೊಲ್ಲರು ಮೊಸರು ತುಂಬಿದ ಕುಡಿಕೆಗಳನ್ನು ಒಡೆಯುವ ಮೂಲಕ ಕೃಷ್ಣಲೀಲೋತ್ಸವಕ್ಕೆ ಚಾಲನೆ ನೀಡಿದರು. ರಥಬೀದಿಯಲ್ಲಿ ಹುಲಿವೇಷಾಧಾರಿಗಳು, ವಿವಿಧ ವೆಷಾಧಾರಿಗಳು ಕೃಷ್ಣಲೀಲೋತ್ಸವಕ್ಕೆ ಮೆರುಗು ತಂದರು. ರಥೋತ್ಸವದ ನಂತರ ಪರ್ಯಾಯ ಶ್ರೀ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಪಾದರು ಭಕ್ತರಿಗೆ ಪ್ರಸಾದ ವಿತರಿಸಿದರು.ವಿಶೇಷವಾಗಿ ಮುಂಬೈನಿಂದ ಆಗಮಿಸಿದ ಆಲಾರೆ ತಂಡದಿಂದ ಮಾನವ ಪಿರಮಿಡ್ ನಡೆಸಿ ಮೊಸರು ಕುಡಿಕೆ ನಡೆಸಿದ್ದು ಗಮನ ಸೆಳೆಯಿತು. ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮದ್ವ ಸರೋವರದಲ್ಲಿ ಜಲಸ್ತಂಬನ ಮಾಡುವ ಮೂಲಕ ಕೃಷ್ಣ ಲೀಲೋತ್ಸವ ಸಮಾಪನಗೊಂಡಿತು.

Related posts

Leave a Reply