Header Ads
Breaking News

ಕೃಷ್ಣ ಜಯಂತಿಗೂ ಕೋವಿಡ್ ಕಾಟ : ಉಡುಪಿ ಜಿಲ್ಲಾಡಳಿತದ ನಡೆಗೆ ಭಕ್ತರಲ್ಲಿ ನಿರಾಸೆ

ಕೃಷ್ಣನೂರು ಉಡುಪಿಯಲ್ಲಿ ಈ ಬಾರಿಯ ಕೃಷ್ಣ ಜನ್ಮೋತ್ಸವ ಬರೀ ಸಂಪ್ರದಾಯಕ್ಕೆ ಸೀಮಿತವಾಗಲಿದೆ. ಕೋವಿಡ್‍ನಿಂದಾಗಿ ಈ ಬಾರಿಯ ಅದ್ದೂರಿ ಕೃಷ್ಣ ಜನ್ಮೋತ್ಸವಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಕಡಗೋಲು ಕೃಷ್ಣನ ಊರು ಉಡುಪಿಯಲ್ಲಿ ಈ ಬಾರಿಯ ಕೃಷ್ಣ ಜನ್ಮೋತ್ಸವ ಈ ಹಿಂದಿನಂತೆ ಇರೊಲ್ಲ. ಕಾರಣ ಕೋವಿಡ್ ಕಾಟ. ಹೌದು…!ಕೃಷ್ಣಜನ್ಮೋತ್ಸವ ಬಂತೆಂದರೆ ಸಾಕು ಉಡುಪಿಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಅನೇಕ ವೇಷ ಧಾರಿಗಳು, ಹುಲಿ ವೇಷದ ಕುಣಿತ ಸೇರಿದಂತೆ ಅನೇಕ ಕಾಲಾ ಪ್ರಕಾರಗಳು ಮೇಳೈಸುತ್ತವೆ. ಕೃಷ್ಣ ಮಠ ಕೂಡಾ ಅದ್ಧೂರಿಯಾಗಿ ಕೃಷ್ಣ ಜನ್ಮೋತ್ಸವವನ್ನು ಮಾಡಲು ಸಕಲ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತದೆ. ಆದ್ರೆ ಈ ಬಾರಿ ಕೋವಿಡ್ ಕಾರಣದಿಂದ ಎಲ್ಲಾ ಸಿದ್ದತೆಗೆ ಬ್ರೇಕ್ ಹಾಕಲಾಗಿದೆ. ವಿಟ್ಲ ಪಿಂಡಿಯಂದು ರಥಬೀದಿಯಲ್ಲಿ ಸಾವಿರಾರು ಭಕ್ತರು ಸೇರಿ ಮೊಸರು ಕುಡಿಕೆಯ ಅಪೂರ್ವ ದೃಶ್ಯಾ ವಳಿಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಆದ್ರೆ ಈ ಬಾರಿಯ ವಿಟ್ಲಪಿಂಡಿ ಉತ್ಸವ ಬರೇ ಸಂಪ್ರದಾಯಕ್ಕೆ ಸೀಮಿತವಾಗಲಿದೆ. ಈ ಬಾರಿಯ ವಿಟ್ಲಪಿಂಡಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೆದಿಸಿದೆ. ಕೃಷ್ಣ ಮಠದ ಸಿಬ್ಬಂದಿಗಳು ಮಾತ್ರ ಇದರಲ್ಲಿ ಭಾಗವಹಿಸಿ ತಮ್ಮ ಸಂಪ್ರದಾಯವನ್ನು ನಡೆಸಬಹುದು ಎಂದು ಸೂಚಿಸಿದೆ. ಇದು ಕೃಷ್ಣ ಭಕ್ತರಲ್ಲಿ ಆಘಾತ ಉಂಟು ಮಾಡಿದ್ದು ನಿರಾಸೆಗೆ ಕಾರಣವಾಗಿದೆ. ಆದರೂ ಸಹ ಕೋವಿಡ್ ಕಾರಣದಿಂದಾಗಿ ಜಿಲ್ಲಾಡಳಿತದ ಸೂಚನೆಯನ್ನ ಪಾಲಿಸಲೇಬೇಕಾಗಿದ್ದು ಈ ಬಾರಿಯ ಕೃಷ್ಣ ಜನ್ಮೋತ್ಸವ ಕೋವಿಡ್ ಕಾಟದಿಂದ ಸಪ್ಪೆಯಾಗುವುದಂತೂ ಸತ್ಯ.

Related posts

Leave a Reply

Your email address will not be published. Required fields are marked *