Header Ads
Header Ads
Breaking News

ಕೃಷ್ಣ ನೇರಪ್ರಸಾರದಲ್ಲಿ ದರ್ಶನ ನೀಡಲಿದ್ದಾನೆ

ಶ್ರೀ ಕೃಷ್ಣ ದೇವರ ಬೆಳಿಗ್ಗಿನ ಪೂಜೆಯ ನೇರಪ್ರಸಾರದ ಕಾರ್ಯಕ್ರಮ ಲೋಕಾರ್ಪಣೆಗೊಂಡಿತು. ಮಠದ ರಾಜಂಗಣದಲ್ಲಿ ನಡೆದ ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಮಠಧೀಶರು ನೇರಪ್ರಸಾರದ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಡುಪಿಯ ಡೆನ್ ನೆಟ್‌ವರ್ಕ್, ಸಿ ಫೋರ್ ಯು ಚಾನಲ್ ನಲ್ಲಿ ಬೆಳಿಗ್ಗಿನ ಉಡುಪಿ ಶ್ರೀ ಕೃಷ್ಣನ ಪೂಜೆಯನ್ನು ಬೆಳ್ಳಿಗೆ ೪ ಗಂಟೆಯಿಂದ ಪ್ರಸಾರಮಾಡಲಾಗುವುದು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಲಿಮಾರು ಶ್ರೀಗಳು ಶ್ರೀ ಕೃಷ್ಣ ವಿಶ್ವ ವ್ಯಾಪಿಯಾಗಿದ್ದು ಇದೀಗ ಎಲ್ಲಾರ ಮನೆ ಮನೆಯಲ್ಲಿಯೂ ದರ್ಶನ ನೀಡಲಿದ್ದಾನೆ. ಹಲವಾರು ಮಂದಿ ಕೃಷ್ಣ ಮಠದ ಕಿಂಡಿಯಲ್ಲಿ ದರ್ಶನಕ್ಕೆ ಅನುಕೂಲವಾಗುತ್ತಿಲ್ಲ ಎಂದು ದೂರು ನೀಡಿದ್ದರು. ಆದರೆ ಶ್ರೀ ಕೃಷ್ಣ ಭಕ್ತ ಕನಕ ದಾಸರಿಗೆ ಒಲಿದು ನಿರ್ಮಿಸಿದ ಕಿಂಡಿಯಾಗಿದೆ. ಅದನ್ನು ಬದಸಲಾಯಿಸಲು ಸಾಧ್ಯವಿಲ್ಲ ಎಂದಿದ್ದೆ. ಆದರೆ ಕೃಷ್ಣ ಭಕ್ತರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದು, ಇದೀಗ ನೇರಪ್ರಸಾರದಲ್ಲಿ ದರ್ಶನ ನೀಡಲಿದ್ದಾನೆ ಎಂದರು.

Related posts

Leave a Reply