Header Ads
Header Ads
Breaking News

ಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಸ್ವರ್ಣ ಹೊದಿಕೆ:ಪಲಿಮಾರು ಸ್ವಾಮೀಜಿಯವರಿಂದ ಅಧಿಕೃತ ಚಾಲನೆ

800 ವರ್ಷ ಇತಿಹಾಸ ಹೊಂದಿರುವ ಕೃಷ್ಣ ಮಠದ ಗರ್ಬಗುಡಿಯ ಮೇಲ್ಛಾವಣಿಗೆ ಸ್ವರ್ಣ ಹೊದಿಕೆ ಅಳವಡಿಸುವ ಕಾರ್ಯಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣಮಠದಲ್ಲಿ ಅಧಿಕೃತ ಚಾಲನೆ ನೀಡಿದರು.ವಿವಿಧ ಧಾರ್ಮಿಕ ಕಾರ್ಯಕ್ರಮ ಸ್ವರ್ಣ ಹೊದಿಕೆಯ ಆಳವಡಿಸುವ ಪೂರ್ವಭಾವಿಯಾಗಿ ವಿದ್ವಾಂಸರಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್, ಹೆರ್ಗ ವೇದವ್ಯಾಸ ರಾಮಮೂರ್ತಿ ಭಟ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅನಂತರ ಶ್ರೀ ನರಸಿಂಹ ಮಂತ್ರ ಹೋಮ, ಶ್ರೀ ಕೃಷ್ಣ ಮಂತ್ರ ಹೋಮ, ಶ್ರೀ ವಿಷ್ಣುಗಾಯತ್ರಿ ಮಂತ್ರ ಹೋಮ, ಶ್ರೀತತ್ವ ಮಂತ್ರ ಹೋಮ ನಡೆಯಿತು.ಪರ್ಯಾಯ ಪಲಿಮಾರು ಶ್ರೀಗಳು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ದೇವರಿಗೆ ಪ್ರಾರ್ಥನೆ, ಮುಷ್ಟಿ ದ್ರವ್ಯ ಸಮರ್ಪಣೆ, ಅನುಜ್ಞಾ ಸ್ವೀಕರಣ ಪ್ರಾಸಾದ ಚೈತನ್ಯ ಸಂಕೋಚ ನಡೆಯಿತು.

Related posts

Leave a Reply

Your email address will not be published. Required fields are marked *