Header Ads
Header Ads
Breaking News

ಕೆಂಪು ಕಲ್ಲಿನ ಕೋರೆ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು. ಲಾರಿಗಳು ಸಂಚರಿಸಿ ಸಂಪೂರ್ಣ ಹದಗೆಟ್ಟ ರಸ್ತೆ. ಲಾರಿ ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು.

ವಿಟ್ಲ ಸಮೀಪದ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಕೆಂಪು ಕಲ್ಲಿನ ಕೋರೆಗೆ ಲಾರಿಗಳು ಸಂಚರಿಸಿ ರಸ್ತೆ ಹದಗೆಟ್ಟು ಹೋಗಿದ್ದರಿಂದ ಮತ್ತೆ ಲಾರಿ ಸಂಚಾರ ಮಾಡಿದ್ದರಿಂದ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಲಾರಿಯನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಕೆಂಪು ಕಲ್ಲಿನ ಕೋರೆಗೆ ಲಾರಿಗಳು ಹೋಗಿ ರಸ್ತೆಯ ಹಲವು ಕಡೆಗಳಲ್ಲಿ ಗುಂಡಿ ಬಿದ್ದಿದೆ. ಸ್ಥಳೀಯವಾಗಿ ಸುಮಾರು ೩೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ತುರ್ತು ವಾಹನಗಳೂ ಸಂಚರಿಸುತ್ತಿಲ್ಲ. ರಿಕ್ಷಾ ಚಾಲಕರು ರಸ್ತೆಯಲ್ಲಿ ಬರಲೊಪ್ಪದೆ ಅಗತ್ಯ ಸiಯದಲ್ಲಿ ಬಾರಿ ಸಮಸ್ಯೆಯಾಗುತ್ತಿದೆ. ತಕ್ಷಣ ರಸ್ತೆ ದುರಸ್ಥಿ ಮಾಡಿಕೊಡಬೇಕು ಮತ್ತು ಮಳೆಗಾಲ ಕೊನೆಯ ವರೆಗೆ ಲಾರಿ ಸಂಚರಿಸ ಬಾರದು ಎಂದು ಎಂದು ಸ್ಥಳೀಯರು ಆಗ್ರಹಿಸಿದರು.ಕೆಂಪು ಕಲ್ಲು ತೆಗೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಆಧಾರದಲ್ಲಿ ಕಾರ್ಯೋನ್ಮುಖವಾಗಿ ಸ್ಥಳಕ್ಕೆ ದಾಳಿ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ಗಣಿ ಮಾಲಕರಿಗೆ ಎರಡು ತಿಂಗಳ ಹಿಂದೆಯೇ ನೋಟೀಸ್ ಜಾರಿಗೊಳಿಸಿ ಖಡಕ್ ಸೂಚನೆಯನ್ನು ನೀಡಿತ್ತು. ಅಳಿಕೆ ಗ್ರಾಮ ಪಂಚಾಯಿತಿಯೂ ನಿವೇಶನ ಜಮೀನಿಗೆ ಮಳೆಗಾಲದಲ್ಲಿ ವಾಹನಗಳು ಯಾವುದೇ ತೆರಳದಂತೆ ಸೂಚನೆ ನೀಡಿತ್ತು. ಆದರೆ ಮತ್ತೆ ಲಾರಿ ಸಂಚಾರ ಮಾಡಿದ್ದರಿಂದ ಪ್ರತಿಭಟನೆ ನಡೆಸಲಾಗಿದೆ.ರಸ್ತೆ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗಣಿ ಇಲಾಖೆ ಸಹಿತ ಎಲ್ಲಾ ಇಲಾಖೆಗಳಿಗೆ ದೂರು ನೀಡಿದರೂ ಯಾವೊಂದು ಕಡೆಯಿಂದಲೂ ಸೂಕ್ತ ಸ್ಪಂದನೆ ಇಲ್ಲ. ದ್ವಿಚಕ್ರ ವಾಹನ ಸವಾರು ಬಿದ್ದು ಗಾಯಗಳಾಗುತ್ತಿದೆ. ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವವರೆಗೆ ನಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಸ್ಥಳೀಯ ನಿವಾಸಿ ರಮೇಶ್ ರೈ ಹೇಳಿದರು.ಗೋಪಾಲ ಪಾಟಾಳಿ ಕುದ್ದುಪವು ಮಾತನಾಡಿ ರಸ್ತೆ ದುರಸ್ಥಿಯ ಬಗ್ಗೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಜನರಿಗೆ ಸಮಸ್ಯೆಗಳು ಆಗುತ್ತಿದ್ದರೂ, ಯಾವುದೇ ಮಾಧ್ಯಮಗಳು ಇತ್ತ ಕಡೆ ಬಂದು ವರದಿಯನ್ನೂ ಮಾಡಿಲ್ಲ. ಎಲ್ಲರ ಗಮನ ಸೆಳೆಯುವ ಉದ್ದೇಶದಿಂದ ಜನ ಸೇರಿಸಿ ಹೋರಾಟ ಮಾಡಿದ್ದೇವೆ. ಊರಿನ ಜನರಿಗೆ ಬೇಕಾಗಿ ಈ ಹೋರಾಟ ಹೊರತು ರಾಜಕೀಯಕ್ಕಾಗಿ ಅಲ್ಲ. ಜನರು ಸಮಸ್ಯೆ ನಿರಂತರ ಸ್ಪಂದಿಸುತ್ತೇವೆ ಎಂದರು.ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ಪಂಚಾಯಿತಿ ಆನುದಾನದಲ್ಲಿ 2 ಕಿ ಮೀ ದೂರದ ರಸ್ತೆ ಡಾಮರೀಕರಣ ಮಾಡಲು ಕಷ್ಟ. ಕಲ್ಲಿನಿಂದ ಕೂಡಿದ ಪಂಚಾಯಿತಿ ನಿವೇಶನ ಜಾಗ ಸಮತಟ್ಟು ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಮತಟ್ಟು ಮಾಡಲು ಗ್ರಾಮ ಸಭೆಯ ನಿರ್ಣಯ ಮಾಡಿ ಖಾಸಗಿಯವರಿಗೆ ನೀಡಲಾಗಿದೆ. ನಿವೇಶನ ಪಡೆದವರಿಗೆ ಜಮೀನನ್ನು ಸಮತಟ್ಟು ಮಾಡುವಂತೆ ಕಾಮಗಾರಿ ನಡೆಸಿದ್ದು, ಊರಿನವರಿಗೆ ಅಭಿವೃದ್ಧಿ ಬೇಡವಾದರೆ ನಮಗೆ ಏನೂ ಸಮಸ್ಯೆ ಇಲ್ಲ. ರಸ್ತೆ ಹಾಳಾದ್ದು ಸರಿ ಮಾಡಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಂಚಾಯಿತಿ ಸದಸ್ಯರಾದ ಸರೋಜ, ಮುಕಾಂಬಿಕಾ ಭಟ್, ಜಗದೀಶ್ ಶೆಟ್ಟಿ, ಮೋನಪ್ಪ ಎರುಂಬು, ಕಂದಾಯ ನಿರೀಕ್ಷಕರಾದ ದಿವಾಕರ್, ಗ್ರಾಮ ಸಹಾಯಕ ಜಗನ್ನಾಥ, ವಿಟ್ಲ ಪೊಲೀಸ್ ಸಹಾಯಕ ಉಪನಿರೀಕ್ಷಕ ದನಂಜಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮಾತುಕತೆ ನಡೆಸಿದರು.ಕೆಂಪು ಕಲ್ಲಿನ ಮಾಲಕರು ಸ್ಥಳಕ್ಕಾಗಮಿಸಿ ರಸ್ತೆಯನ್ನು ತಕ್ಷಣ ಸರಿಪಡಿಸುವ ಕಾರ್ಯ ಮಾಡಿಕೊಡುವುದಾಗಿ ಹೇಳಿದರು. ಇದರಿಂದ ಸಮಾಧಾನಗೊಂಡ ಸ್ಥಳೀಯರು ಪ್ರತಿಭಟನೆಯನ್ನು ಹಿಂಪಡೆದರು.ಗೋಪಾಲ ಪಾಟಾಳಿ ಕುದ್ದುಪವು, ಸ್ಥಳೀಯರಾದ ಗುರುಪ್ಪ ನಾಯ್ಕ, ಕಮಾಲಾಕ್ಷ, ಪುಟ್ಟ ನಾಯ್ಕ, ಕರುಣಾಕರ ರೈ, ರಮೇಶ್ ನಾಯ್ಕ, ಸುಂದರ ನಾಯ್ಕ, ಸುನಂದ, ಗಿರಿಜ, ಯಶೋದ, ನಳಿನಿ, ಸುಬ್ಬ ಪಾಟಾಳಿ ಪೊರ್ಸಮೂಲೆ, ಆನಂದ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts

Leave a Reply