Header Ads
Header Ads
Breaking News

ಕೆಂಪು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದಕ ವಿಟ್ಲದ ಅಳಿಕೆಯಲ್ಲಿ ಉದ್ಘಾಟನೆ

ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾ ಕೇಂದ್ರದಲ್ಲಿ ಕಂಪು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದಕ ಕಂಪನಿ ನಿಯಮಿತದ ಉದ್ಘಾಟನಾ ಸಮಾರಂಭ ನಡೆಯಿತು.

ಪಾಲು ಭಂಡವಾಳ ದೃಢ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರಲ್ಲಿ ಜಿಲ್ಲೆಗೆ ಹೆಚ್ಚಿನ ಮಹತ್ವವಿದೆ. ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಹೇಳಿದ ದರ ನೀಡಿ ಖರೀದಿ ಮಾಡುತ್ತಿರುವ ನಾವು ಕೃಷಿ ಉತ್ಪನ್ನಕ್ಕೆ ಬೆಲೆಯನ್ನು ನಿಗದಿ ಪಡಿಸಿ ಕೊಡುವ ಕಾರ್ಯ ಮಾಡುತ್ತಿಲ್ಲ. ಸಂಘಟನೆ ಹಾಗೂ ಬದ್ಧತೆ ಇದ್ದಾಗ ಕೃಷಿಕರು ಉತ್ತಮವಾಗಿರಲು ಸಾಧ್ಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ ಕಾರ್ಣಿಕ್ ಮಾತನಾಡಿ ಹಿಂದೆ ಸುಮಾರು ಶೇ.80 ರಷ್ಟು ಇದ್ದ ಕೃಷಿ ಚಟುವಟಿಕೆ ಪ್ರಸ್ತುತ ಶೆ.60 ಕ್ಕೆ ಇಳಿದಿದೆ. ಆದರೆ ಕೃಷಿಕರ ಕೆಲಸದ ಫಲವಾಗಿ ಯಾವುದೇ ರೀತಿಯ ಆಹಾರದ ಕೊರತೆಯಾಗಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಕೃಷಿ ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆ ಪ್ರವೀಣ್, ಕಂಪನಿ ಅಧ್ಯಕ್ಷ ಯಂ. ಗೋವಿಂದ ಭಟ್ ಮಾಣಿಮೂಲೆ ಉಪಸ್ಥಿತರಿದ್ದರು.