Header Ads
Header Ads
Breaking News

ಕೆಎಂಸಿ ಆಸ್ಪತ್ರೆಯ ಸಂಜೀವಿನ ಸಭಾಂಗಣದಲ್ಲಿ ಮೂರನೇ ಬಾಲಶಲ್ಯ ಕ್ರಿಯಾ ಮಿಷನ್ ವೀಕ್ ಕಾರ್ಯಕ್ರಮ

ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಮೂರನೇ ಬಾಲ ಶಲ್ಯ ಕ್ರಿಯಾ ಮಿಷನ್‌ನ ವೀಕ್ ಉದ್ಘಾಟನಾ ಸಮಾರಂಭವು ಸಂಜೀವಿನಿ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮಕ್ಕಳ ಸುಧಾರಿತ ಶಸ್ತ್ರಚಿಕಿತ್ಸೆಯ ಬಗ್ಗೆ ವೈದರು ಮಾಹಿತಿ ನೀಡಿದರು.

ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯ ಸಂಜೀವಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಪ್ರೊ. ಚಾನ್ಸಲರ್ ಡಾ. ಹೆಚ್.ಎಸ್. ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹುಟ್ಟು ಎಂಬುವುದು ಆಕಸ್ಮಿಕ, ಪ್ರತಿಯೊಬ್ಬರಿಗೂ ಸಹಾಯ ಮಾಡುವುದು ಸಾಮಾಜಿಕ ಜವಾಬ್ದಾರಿ, ಆಶ್ವಿನ್ ಮತ್ತು ಅವರ ಪೌಂಡೇಶನ್ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಆನಂತರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಮಾತನಾಡಿ, ಕೆಎಂಸಿ ಆಸ್ಪತ್ರೆಯು ಯಾವಾಗಲು ಬಡವರಿಗೆ ಸಹಾಯವನ್ನು ಮಾಡುತ್ತಿದೆ. ಸಮಾಜದ ಎಲ್ಲಾ ಕುಟುಂಬವು ಖುಷಿಯಾಗಿ ಬಾಳಬೇಕೆಂಬುದು ನಮ್ಮೆಲ್ಲರ ಗುರಿ. ಆ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆಯು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.ಇದೇ ವೇಳೆ ಫೌಂಡರ್ ಚೇರ್‌ಮೆನ್ ಡಾ. ಅಶ್ವಿನ್ ಪಿಂಪಾಲ್‌ವರ್ ಅವರು ಮಾತನಾಡಿ, ನನ್ನ ತರಬೇತಿಯ ಸಮಯದಲ್ಲಿ ದೇಶದಲ್ಲಿ ಬಡತನ ಇರುವುದನ್ನು ಗಮನಿಸಿದ್ದೆ. ನಾನು ಅಂತಹ ಬಡವರಿಗೆ ಸೇವೆಯನ್ನು ಮಾಡಬೇಕೆಂದು ಅನಿಸುತ್ತಿದ್ದೆ. ಅದಕ್ಕಾಗಿ ನನಗೊಮದು ಅವಕಾಶ ಸಿಕ್ಕಿದೆ ಎಂದರು.ಈ ಸಂದರ್ಭ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್, ಮಾಹೆಯ ಪ್ರೊ. ವಯ್ಸ್ ಚಾನ್ಸ್‌ಲರ್ ಡಾ. ಸುರೇಂದ್ರ ಶೆಟ್ಟಿ, ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್ ಕೆಎಂಸಿ ಆಸ್ಪತ್ರೆಯ ಸಿಒಒ ಸಗೀರ್ ಸಿದ್ದಿಕ್ಕಿ ಉಪಸ್ಥಿತರಿದ್ದರು.

Related posts

Leave a Reply