Header Ads
Header Ads
Breaking News

ಕೆಎಸ್‌ಆರ್‌ಟಿಸಿ ಅಧಿಕಾರಿ ವರ್ಗಾವಣೆಗೆ ಪಟ್ಟು : ಪುತ್ತೂರಿನ ಕಾರ್ಮಿಕ ಸಂಘಟನೆ ಪ್ರತಿಭಟನೆ

ಸ್ವಜನಪಕ್ಷಪಾತ ಮತ್ತು ಕಾರ್ಮಿಕರ ಮೇಲೆ ವೈಯುಕ್ತಿಕ ದ್ವೇಷ ಸಾಧನೆ ಮಾಡುತ್ತಿರುವ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಅವರು ಇಲ್ಲಿಂದ ವರ್ಗಾವಣೆಗೊಂಡಿದ್ದು, ತಕ್ಷಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಾದ ಕೆಎಸ್ಸಾರ್ಟಿಸಿ ಮಜ್ದೂರು ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ಮುಕ್ರಂಪಾಡಿಯ ಪುತ್ತೂರು ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಸಂಘದ ವಕ್ತಾರ ಶಾಂತಾರಾಮ ವಿಟ್ಲ ಮಾತನಾಡಿ, ಪುತ್ತೂರು ವಿಭಾಘದಲ್ಲಿರುವ ಶೇ 90 ಮಂದಿ ಕಾರ್ಮಿಕರಿಗೆ ಈ ಅಧಿಕಾರಿಯಿಂದ ತೊಂದರೆಯಾಗಿದೆ. ಇಲ್ಲಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳಿಗೂ ತೊಂದರೆ ನೀಡಿದ್ದಾರೆ. ನ್ಯಾಯ ಕೇಳಿದರೆ ಶೋಕಾಸು ನೋಟಿಸು ನೀಡುವ ಮೂಲಕ ಅನ್ಯಾಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಹಿಂದೆ ಅಕ್ರಮಕೂಟ ಒಂದಿದ್ದು, ಕೆಎಸ್ಸಾರ್ಟಿಸಿ ಸಂಸ್ಥೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರತಿಭಟನಾಕಾರರ ದೂರನ್ನು ಆಲಿಸಿದರು. ನಂತರ ಮಾತನಾಡಿ, ಸ್ವಜನಪಕ್ಷಪಾತದ ಧೋರಣೆಯ ಅಧಿಕಾರಿಗಳಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಇಲ್ಲಿರುವ ಅಧಿಕಾರಿ ಅವರು ಕಾರ್ಮಿಕರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಕೆಎಸ್ಸಾರ್ಟಿಸಿಯ ಮೇಲಾಧಿಕಾರಿಯವರಲ್ಲಿ ದೂರವಾಣಿ ಮೂಲಕ ಮಾತನಾಡಿದ್ದೇನೆ. ಇನ್ನು 24 ಗಂಟೆಯೊಳಗೆ ಅಧಿಕಾರಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮಜ್ದೂರು ಸಂಘದ ಕಾರ್ಯದರ್ಶಿ ವೆಂಕಟ್ರಮಣ ಭಟ್, ಸಿಐಟಿಯು ಸಂಘದ ಅಧ್ಯಕ್ಷ ದಿನೇಶ್ ಸಿ.ಎಚ್ ಪ್ರಧಾನ ಕಾರ್ಯದರ್ಶಿ ರೂಪೇಶ್ ಕುಮಾರ್, ಸದಸ್ಯ ಯೋಗೀಂದ್ರ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *