Header Ads
Header Ads
Breaking News

ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ಕಾವೂರುವರೆಗೆ ರಸ್ತೆ ಅಗಲೀಕರಣ ಚರಂಡಿ, ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಶಾಸಕ ಜೆ.ಆರ್. ಲೋಬೋರಿಂದ ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರು ಬರುವ ಕೆ.ಎಸ್.ಆರ್‌ಟಿಸಿ ಜಂಕ್ಷನ್‌ನಿಂದ ಕಾವೂರು ಜಂಕ್ಷನ್‌ವರೆಗಿನ ರಸ್ತೆ ಅಗಲೀಕರಣ ಮತ್ತು ಚರಂಡಿ, ಫುಟ್‌ಪಾತ್ ಅಭಿವೃದ್ಧಿಯ ಕಾಮಗಾರಿಕೆ ಶಿಲಾನ್ಯಾಸ ಕಾರ್ಯಕ್ರಮವು ಬಿಜೈಯ ಬಬ್ಬು ಸ್ವಾಮಿ ದೇವಸ್ಥಾನದ ಬಳಿ ಜರುಗಿತು.
ರಸ್ತೆ ಅಭಿವೃದ್ಧಿಗೆ ಶಾಸಕ ಜೆ.ಆರ್. ಲೋಬೋ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪ್ರೀಮಿಯಂ ಎಫ್‌ಎಆರ್ ಅನುದಾನದಲ್ಲಿ ಈ ಭಾಗದ ರಸ್ತೆ, ಚರಂಡಿ ಮತ್ತು ಫುಟ್‌ಫಾತ್ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿದ್ದೇವೆ ಎಂದರು.ಮೇಯರ ಕವಿತಾ ಸನಿಲ್ ಮಾತನಾಡಿ ಶಾಸಕರ ಮುತುವರ್ಜಿಯಿಂದ ಕೆ.ಎಸ್.ಆರ್‌ಟಿಸಿ ಜಂಕ್ಷನ್‌ನಿಂದ ಕಾವೂರು ಜಂಕ್ಷನ್‌ವರೆಗಿನ ರಸ್ತೆ ಅಗಲೀಕರಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಿ ಇಲ್ಲಿನ ಜನತೆಗೆ ಅನುವು ಮಾಡಿಕೊಡಲಾಗುವುದು ಎಂದರು.ಈ ಸಂದರ್ಭ ಮನಪಾ ಉಪಮೇಯರ್ ರಜನೀಶ್ ಕಾಪಿಕಾಡ್ ಸಹಿತ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply