Header Ads
Breaking News

ಕೆಎಸ್‌ಆರ್‌ಟಿಸಿ ಬಸ್‌ಪಾಸ್ ವಿತರಿಸುವಂತೆ ಒತ್ತಾಯ ಪುತ್ತೂರಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ

ಪುತ್ತೂರು: ರಾಜ್ಯ ಸರಕಾರವು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೆಎಸ್‌ಆರ್‌ಟಿಸಿ ಬಸ್ ಪಾಸ್ ವಿತರಿಸುವಂತೆ ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಹಸ್ರಾರು ಪದವಿ ತರಗತಿಯ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.ತರಗತಿಗಳನ್ನು ಬಹಿಷ್ಕರಿಸಿ ವಿವೇಕಾನಂದ ಪ್ರತಿಮೆಯ ಬಳಿ ಜಮಾಯಿಸಿದ ವಿದ್ಯಾರ್ಥಿ ಸಮುದಾಯ ರಾಜ್ಯ ಸರಕಾರದ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗಿತು. ಉಚಿತ ಬಸ್ ಪಾಸ್ ನೀಡುವ ಭರವಸೆಯನ್ನು ಈಡೇರಿಸದ ಸರಕಾರದ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಂದಾಳು ಸಂದೇಶ್, ರಾಜ್ಯ ಸರಕಾರ ವಚನಭ್ರಷ್ಠವಾಗಿದೆ. ಮುಂಗಡಪತ್ರದಲ್ಲೂ ಉಚಿತ ಬಸ್‌ಪಾಸ್ ಕುರಿತು ಯಾವುದೇ ಪ್ರಸ್ತಾವನೆ ಮಾಡಲಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿರುವ ಸರಕಾರವು ಅನಗತ್ಯವಾಗಿ ಕೋಟಿಗಟ್ಟಲೆ ರೂಪಾಯಿಗಳನ್ನು ವ್ಯಯಿಸುತ್ತದೆ. ವಿದ್ಯಾರ್ಥಿಗಳ ನ್ಯಾಯಯುತ ಉಚಿತ ಬಸ್‌ಪಾಸ್ ಬೇಡಿಕೆಯನ್ನು ಈಡೇರಿಸುಸುತ್ತಿಲ್ಲ. ವಿದ್ಯಾರ್ಥಿಗಳು ಪಾಸ್ ಪಡೆಯಲು ಪಾವತಿಸಿದ ಹಣವನ್ನು ಸರಕಾರ ಮರು ಪಾವತಿಸದಿದ್ದರೆ ಇನ್ನಷ್ಟು ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ವಿವೇಕಾನಂದ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಿಖಿತ್, ಕಾರ್ಯದರ್ಶಿ ಸಂಕೇತ್, ಜೊತೆ ಕಾರ್ಯದರ್ಶಿ ನೀಮಾ, ಡಾ, ರೋಹಿಣಾಕ್ಷ ಶಿರ್ಲಾಲು ಮತ್ತಿತರರು ಪಾಲ್ಗೊಂಡಿದ್ದರು.

Related posts

Leave a Reply