Header Ads
Breaking News

ಕೆಐಒಸಿಎಲ್ ವಿಪ್ಸ್ ಆಶ್ರಯದಲ್ಲಿ ಕಾರ್ಯಾಗಾರ : ಮಹಿಳಾ ದಿನದ ಅಂಗವಾಗಿ ಸಾಧಕರಿಗೆ ಸಮ್ಮಾನ

ಕೆಐಒಸಿಎಲ್ ಲಿಮಿಟೆಡ್‍ನ ಅಡಿಯಲ್ಲಿರುವ ಪಬ್ಲಿಕ್ ಸೆಕ್ಟರ್‍ನಲ್ಲಿರುವ ಮಹಿಳೆಯರ ಆಶ್ರಯದಲ್ಲಿ ಮಹಿಳಾ ದಿನದ ಅಂಗವಾಗಿ ಕಾರ್ಯಾಗಾರ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಜರುಗಿತು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಅವರನ್ನು ಸಮ್ಮಾನಿಸಿಲಾಯಿತು. ಮಹಿಳಾ ಸಾಧಕರಾದ ಪೊಲೀಸ್ ಇನ್ ಸೆಕ್ಟರ್ ರೇವತಿ, ಡಾ. ಚಂದ್ರಪ್ರಭಾ, ಸಬಿತಾ ಮೋನೀಸ್, ಆಶಾ ಕಾರ್ಯಕರ್ತೆ ಗಾಯತ್ರಿ ಶೆಟ್ಟಿ ಹಾಗೂ ಯೋಗ ಗುರು ಚಂದ್ರಕಲಾ ಆರ್.ಅರ್ ಅವರನ್ನು ಸಮ್ಮಾನಿಸಲಾಯಿತು. ನ್ಯಾಯವಾದಿ ಕವಿತಾ ಎಂ. ಕಾರ್ಯಾಗಾರ ನಡೆಸಿಕೊಟ್ಟರು.


ಇದೇ ಸಂದರ್ಭದಲ್ಲಿ ಬಲ್ಮಠ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಆನಂತರ ಕಾಲೇಜಿಮ ಮಕ್ಕಳಿಗೆ ಮಾಸ್ಕ್, ಪೆನ್ ಪುಸ್ತಕ, ಹ್ಯಾಂಡ್ ವಾಷ್, ಸ್ಯಾನಿಟೈಜರ್‍ಗಳನ್ನು ವಿತರಿಸಲಾಯಿತು. ಸಂಸ್ಥೆಗೆ ಸ್ಟೀಲ್ ಡಸ್ಟ್‍ಬಿನ್‍ಗಳನ್ನು ಹಸ್ತಾಂತರಿಸಲಾಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಉಪಮೇಯರ್ ಸುಮಂಗಲಾ ರಾವ್ ಹಾಗೂ ಖ್ಯಾತ ಗಾಯಕಿ ರೂಪಾ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕೆಐಒಸಿಎಲ್ ಸಿಎಚಿಡಿ ಎಂ.ವಿ. ಸುಬ್ಬ ರಾವ್, ಜನರಲ್ ಮ್ಯಾನೇಜರ್ ವಿ.ಎಸ್. ಭಟ್, ಸೀನಿಯರ್ ಮ್ಯಾನೇಜರ್ ಎಸ್. ಮುರ್ಗೇಶ್, ವಿಪ್ಸ್ ಕೋ- ಅರ್ಡಿನೇಟರ್ ಮಾಲಿನಿ ಜಿ. ನಾಯಕ್ ಹಾಗೂ ಇತರ ಮಹಿಳಾ ಉದ್ಯೋಗಿಗಳು ಈ ಸಂದರ್ಭ ಉಪಸ್ಥಿತರದ್ದರು.

Related posts

Leave a Reply

Your email address will not be published. Required fields are marked *