Header Ads
Header Ads
Breaking News

 ಕೆಟಿಎಂ ಬೈಕ್‌ ಗಳ ಸಾಹಸ

ಹೆಸರಾಂತ ರೇಸಿಂಗ್ ಬೈಕ್‌ಗಳ ಬ್ರಾಂಡ್ ಕೆಟಿಎಂ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿರುವ ಕೆಫೆ ಕಾರ್ಟ್‌ನಲ್ಲಿ ಕೆಟಿಎಂ ಬೈಕ್ ಮಾಲೀಕರು ಮತ್ತು ಬೈಕಿಂಗ್ ಉತ್ಸಾಹಿಗಳಿಗಾಗಿಯೇ ರೋಮಾಂಚಕ ಬೈಕ್ ಸ್ಟಂಟ್ ಆಯೋಜಿಸಲಾಗಿತ್ತು.

ಬೈಕ್ ಎಂದರೇ ಯುವಕರಿಗೆ ಎಲ್ಲಿಲ್ಲದ ಖುಷಿ, ವಿಶಿಷ್ಟ ಸ್ಟಂಟ್‌ಗಳ ಮೂಲಕ ಬೈಕನ್ನು ಗಿರಗಿರನೇ ತಿರುಗಿಸುವುದೆಂದರೇ ಯುವಕರು ಮತ್ತಷ್ಟು ಖುಷಿ. ಹೌದು. ಅಡ್ಯಾರ್ ಕಣ್ಣೂರಿನಲ್ಲಿರುವ ಕೆಫೆ ಕಾರ್ಟ್‌ನಲ್ಲಿ ಬೈಕ್‌ಗಳ ಸಾಹಸ. ಸಂಜೆ ಬಳಿಕ ಆರಂಭವಾದ ಈ ಸ್ಟಂಟ್ ಶೋ ನೋಡಲು ಯುವಕರ ದಂಡೇ ನೆರೆದಿತ್ತು.

ವೃತ್ತಿಪರ ಸಾಹಸಿ ಬೈಕ್ ಸವಾರರೊಂದಿಗೆ ಮಂಗಳೂರು ಸುತ್ತಮುತ್ತಲ ಪ್ರದೇಶದ ಗ್ರಾಹಕರು ತಮ್ಮ ಕೆಟಿಎಂ ಬೈಕ್‌ಗಳೊಂದಿಗೆ ರೇಸ್‌ನಲ್ಲಿ ಪಾಲ್ಗೊಂಡಿದ್ದರು. ಕೆಟಿಎಂ ೨೦೦ ಡ್ಯೂಕ್ ಮತ್ತು ಕೆಟಿಎಂ ಆರ್‌ಸಿ ೨೦೦ ಬೈಕ್‌ಗಳ ಮಾಲೀಕರು ಇದರಲ್ಲಿ ಪಾಲ್ಗೊಂಡಿದ್ದರು. ಇದುವರೆಗೆ ಕೆಟಿಎಂ ಡ್ಯೂಕ್ ಬೈಕ್‌ಗಳು ೨೭೦ಕ್ಕೂ ಹೆಚ್ಚು ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ನಾನಾ ವಿಭಾಗಗಳಲ್ಲಿ ಗೆದ್ದುಕೊಂಡಿದೆ.

Related posts

Leave a Reply