Header Ads
Header Ads
Header Ads
Breaking News

ಕೆಥೋಲಿಕ್ ಸಭಾ ಕೇಂದ್ರೀಯ ಕ್ರೀಡೋತ್ಸವ 2019

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಮಂಗಳೂರು ಧರ್ಮಪ್ರಾಂತ್ಯದ 11 ವಲಯಗಳ ಕ್ರೈಸ್ತ ಕ್ರೀಡಾಳುಗಳಿಗಾಗಿ ಆಯೋಜಿಸಿದ್ದ ಕೇಂದ್ರೀಯ ಹಂತದ ಕ್ರೀಡೋತ್ಸವ 2019 ನಡೆಯಿತು. 

ಆಶೀರ್ವಚನ ನೀಡಿ ಮಾತನಾಡಿದ ಕಥೋಲಿಕ್ ಸಭಾ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ ಮ್ಯಾಥ್ಯು ವಾಸ್, ಕ್ರೀಡೆಯ ಮೂಲಕ ಎಲ್ಲಾ ಸಮುದಾಯಗಳ ನಡುವೆ ಒಗಟ್ಟು, ಸಹಬಾಳ್ವೆ ಹಾಗೂ ಸಹೃದಯತೆಯ ಮನೋಭಾವ ಬೆಳೆಯಲಿ’ ಎಂದು ಹಾರೈಸಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇತರರನ್ನು ಸೋಲಿಸಬೇಕೆಂಬುದನ್ನು ಬಿಟ್ಟು, ತನ್ನನ್ನು ತಾನು ಸೋಲಿಸಿ ಗೆಲ್ಲಬೇಕೆಂಬ ಮನೋಭಾವ ಹೆಚ್ಚಬೇಕು. ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಮಾತ್ರವಲ್ಲದೆ ಆ ಮೂಲಕ ಒಗ್ಗಟ್ಟು ಹೆಚ್ಚುವುದಕ್ಕೆ ಅವಕಾಶವಾಗುತ್ತದೆ ಎಂದರು.

ಅನಿವಾಸಿ ಉದ್ಯಮಿ ಅಲ್ಫ್ರೆಡ್ ಸಿಕ್ವೇರಾ ಪಾಲಡ್ಕ ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಎಪಿಸ್ಕೋಪಲ್ ಸಿಟಿ ವಲಯದ ಮುಖ್ಯ ಧರ್ಮಗುರು ಜೆ.ಬಿ. ಕ್ರಾಸ್ತಾ ಪಾರಿವಾಳಗಳನ್ನು ಹಾರಿಬಿಟ್ಟು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅನಿವಾಸಿ ಉದ್ಯಮಿ ಆಲ್ಫ್ರೆಡ್ ಸಿಕ್ವೇರಾ, ಪೆಜಾರ್ ವಲಯದ ಪ್ರಧಾನ ಧರ್ಮಗುರು ಮಾರ್ಸೆಲ್ ಸಲ್ಡಾನ್ಹಾ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಯ್ಲಸ್ ಡಿಸೋಜಾ ತಾಕೊಡೆ ಪಥಸಂಚಲನದ ಧ್ವಜವಂದನೆ ಸ್ವೀಕರಿಸಿದರು. ಆಕರ್ಷಕ ಪಥಸಂಚಲನದಲ್ಲಿ ನಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್, ಪುತ್ತೂರು ಸೈಂಟ್ ಫಿಲೊಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ.ಫಾ ಎಫ್.ಎಕ್ಸ್. ಗೋಮ್ಸ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಕೇಂದ್ರೀಯ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೋಸ್ತಾ ಅಧ್ಯಕ್ಷತೆ ವಹಿಸಿದ್ದರು.ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ಪಾವ್ಲ್ ಸಿಕ್ವೇರಾ ಕೋರ್ಪುಸ್ ಕ್ರೀಸ್ತೀ ಚರ್ಚ್‍ನಲ್ಲಿ ಕ್ರೀಡಾಜ್ಯೋತಿಯನ್ನು ಆಶೀರ್ವಚಿಸಿ ಅಂತರಾಷ್ಟ್ರೀಯ ದೇಹದಾಡ್ರ್ಯ ಪಟು ಅನಿಲ್ ಮೆಂಡೋನ್ಸಾ ಅವರಿಗೆ ಹಸ್ತಾಂತರಿಸಿದರು.

ದ.ಕ. ಜಿಪಂ ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಐಸಿವೈಎಮ್ ಕೇಂದ್ರೀಯ ನಿರ್ದೇಶಕ ರೆ.ಫಾ ರೊನಾಲ್ಡ್ ಡಿಸೋಜಾ, ಸುರತ್ಕಲ್ ವಲಯದ ಪ್ರಧಾನ ಧರ್ಮಗುರು ಪಾವ್ಲ್ ಪಿಂಟೊ, ಮಂಗಳೂರು ದಕ್ಷಿಣ ವಲಯದ ಪ್ರಧಾನ ಧರ್ಮಗುರು ಜೆ.ಬಿ. ಸಲ್ಡಾನ್ಹಾ, ಮಾನಸ ವಿಶೇಷ ಶಾಲೆಯ ಹೆನ್ರಿ, ಕಥೋಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿ ನವೀನ್ ಬ್ರ್ಯಾಗ್ಸ್, ಮೂಡುಬಿದಿರೆ ಕಥೊಲಿಕ್ ಸಭಾ ವಲಯಾಧ್ಯಕ್ಷ ವಿಕ್ಟರ್ ಕಡಂದಲೆ, ಕಾರ್ಯದರ್ಶಿ ವಿಲ್ಸನ್ ಡಿಸೋಜಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *