Header Ads
Breaking News

ಕೆನರಾ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಮಾರಂಭ

ಮಂಗಳೂರಿನ ಉರ್ವ ಕೆನರಾ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ 2019-20ನೇ ಸಾಲಿನ ವಾರ್ಷಿಕ ಸಮಾರಂಭ ಜರುಗಿತು. ನಗರದ ಉರ್ವ ಶಾಲಾ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಮಂಗಳೂರಿನ ಉರ್ವ ಕೆನರಾ ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘ ವಾರ್ಷಿಕ ಸಮಾರಂಭಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮ ವನ್ನು ಧ್ವಜಾರೋಹಣ ನೆರೆವೇರಿಸುವ ಮೂಲಕ ಸಂಸ್ಥೆಯ ಹಳೆ ವಿದ್ಯಾರ್ಥಿ ಮುಂಬೈ ವೀಣಾ ಕಾಮತ್ ಉದ್ಘಾಟಿಸಿದರು. ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ದೇವಾನಂದ ಪೈ ಅವರು, ಹಳೇ ವಿದ್ಯಾರ್ಥಿಗಳ ಸಂಘಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಆಗತ್ಯವಿದೆ.ನಾನೆಲ್ಲರೂ ಒಗ್ಗೂಡಿಸಿ ಸಂಘವನ್ನ ಬೆಳೆಸಬೇಕೆಂದರು.

ಇನ್ನು ಸಮಾರಂಭದಲ್ಲಿ ಹಳೇ ವಿದ್ಯಾರ್ಥಿ ರೂಪ ಮಾತನಾಡಿ, ಹಳೇವಿದ್ಯಾರ್ಥಿ ಸಂಘದ ಪ್ರೀತಿ ವಾತ್ಸಲ್ಯ ಇಟ್ಟುಕೊಂಡು ಬಂದಿದ್ದೇನೆ. ಮುಂದೆಯೂ ಇದೇ ರೀತಿ ಪ್ರೋತ್ಸಾಹ ನೀಡುತ್ತೇನೆ ಅಂತಾ ಹೇಳಿದರು.

ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುನೀಲ್ ದತ್ತ್ ಪೈ ಅವರು ಗಣ್ಯರನ್ನ ಸ್ವಾಗತಿಸಿದರು. ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷ ಎಂ.ರವೀಂದ್ರ ಶೇಟ್, ಜತೆ ಕಾರ್ಯದರ್ಶಿ ಗಳಾದ ಸುಧೀರ್ ಭಂಡಾರ್ ಕಾರ್, ಸುರೇಶ್ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *