Header Ads
Breaking News

ಕೆನರಾ ಸ್ಪೈನ್‌ನ ಪೋರಮ್ ಮಂಗಳೂರು ಸಂಸ್ಥೆಯಿಂದ 3 ದಿನಗಳ ಬೆನ್ನು ಹುರಿ ತಜ್ಞರ ಸಮ್ಮೇಳನ

ಕೆನರಾ ಸ್ಪೈನ್‌ನ ಪೋರಮ್ ಮಂಗಳೂರು ಸಂಸ್ಥೆ, ಕೆನರಾ ಆರ್ಥೋಪೆಡಿಕ್ ಮತ್ತು ಕರ್ನಾಟಕ ಮೂಳೆ ತಜ್ಞರ ಸಂಘದ ಬೆನ್ನುಹುರಿ ತಜ್ಞರ ಸಹಭಾಗಿತ್ವದಲ್ಲಿ ಮೂರು ದಿನಗಳ ಬೆನ್ನು ಹುರಿ ತಜ್ಞರ ಸಮ್ಮೇಳನವನ್ನು ಹಮ್ಮಿಕೊಂಡಿದೆ ಎಂದು ಕೆನರಾ ಸ್ಪೈನ್‌ನ ಪೋರಮ್‌ನ ಅಧ್ಯಕ್ಷರಾದ ಡಾ.ಸಿ.ಕೆ ಬಲ್ಲಾಳ್ ತಿಳಿಸಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಭಾರತೀಯ ಬೆನ್ನು ಮೂಳೆ ತಜ್ಞರ ಸಂಘದ ಅಡಿಯಲ್ಲಿ ಪ್ರತೀ ವರ್ಷ ನಡೆಯುವ ಈ ಸಮ್ಮೇಳನ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿದ್ದು, ಭಾರತದ ಮೂಲೆ ಮುಲೆಗಳಿಂದ ೨೫೦ಕ್ಕೂ ಅಧಿಕ ಬೆನ್ನುಮುಳೆ ತಜ್ಞರು ಹಾಗೂ ವಿಶೇಷ ತಜ್ಞರಾಗಿ ಕೊರಿಯಾ ದೇಶದಿಂದಲೂ ತಜ್ಞರು ಭಾಗವಹಿಸುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಬೆನ್ನು ಮೂಳೆಯ ಸೋಂಕು ಮತ್ತು ಅದರ ಪರಿಣಾಮಗಳ ಬಗ್ಗೆ ವಿಶೇಷ ಚರ್ಚೆ, ವಿಷಯ ವಿನಿಮಯ ಹಾಗೂ ಉದಯೋನ್ಮುಖ ತಜ್ಞರ ತರಬೇತಿ ನಡೆಯುತ್ತಿದ್ದು ಸೋಂಕುಗಳನ್ನು ತಡೆಯುವ, ಚಿಕಿತ್ಸೆ ನೀಡುವ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಡಾ. ಜನಾರ್ಧನ ಐತಾಳ, ಸುರೇಂದ್ರ ಕಾಮತ್, ಡಾ. ಜಾಕಬ್ ಚಾಕೋ, ಸಮ್ಮೇಳನದ ಉಪಾಧ್ಯಕ್ಷರಾದ ಡಾ. ಈಶ್ವರ ಕೀರ್ತಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *