Header Ads
Breaking News

ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ : ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡ ಎನ್‍ಕೆ ಸುಲ್ತಾನ್ ತಂಡ

ಮಂಜೇಶ್ವರ: ಬಂಗ್ರ ಮಂಜೇಶ್ವರ ಕಾಡಿಯಾರ್ ಸ್ಟೇಡಿಯಂನಲ್ಲಿ ನಡೆದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟದಲ್ಲಿ ಎನ್‍ಕೆ ಸುಲ್ತಾನ್ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡರು.

ಬಂಗ್ರ ಮಂಜೇಶ್ವರ ವಲಯದಲ್ಲಿ ಇರುವ ಕ್ರಿಕೆಟ್ ಆಟಗಾರರನ್ನು ಜೊತೆಗೂಡಿಸಿ 6 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಾಡಿಯಾರ್ ಪ್ರಿಮಿಯರ್ ಲೀಗ್ ನಾಡಿಗೆ ಉತ್ಸವ ಲಹರಿ ತುಂಬಿತ್ತು. ಫೈನಲ್ ಪಂದ್ಯದಲ್ಲಿ ಕೆಆರ್ ಸ್ಟ್ರೈಕರ್ಸ್ ಮತ್ತು ಎನ್‍ಕೆ ಸುಲ್ತಾನ್ ನಡುವೆ ಸೆಣಸಾಟ ನಡೆಯಿತು. ಕಿಂಗ್ಸ್ ಕಾಡಿಯಾರ್ ಮೂರನೇ ಸ್ಥಾನ ಪಡೆದರು. ಸಿದ್ದೀಖ್ ರವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭವನ್ನು ಲತೀಫ್ ಕೆಎಸ್ ಉದ್ಘಾಟನೆ ಮಾಡಿದರು.
ಅಬ್ದುಲ್ ಹಮೀದ್ ಬಹುಮಾನ ವಿತರಣೆ ಗೈದರು. ಖಾದರ್ ಹಸನ್,ಅಂದ್ರು, ಇಬ್ಬು ಯುಸುಫ್ ಶಾಫಿ, ಅಶ್ರಫ್ ಇಬ್ರಾಹಿಮ್ ಬಿಯಂ ಮುಂತಾದವರು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *