Header Ads
Header Ads
Header Ads
Breaking News

ಕೆಪಿ‌ಎಂಇ 2017 ಕಾಯಿದೆ ತಿದ್ದುಪಡಿಗೆ ಆಗ್ರಹ ಐ‌ಎಂಎ ಯಿಂದ ನ.13 ರಂದು ಬೆಳಗಾಂ ಚಲೋ ನ.13 ರಂದು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲು ನಿರ್ಧಾರ

ಭಾರತೀಯ ವೈದ್ಯಕೀಯ ಸಂಘದಿಂದ ನವೆಂಬರ್ 13 ರಂದು ಬೆಳಗಾಂ ಚಲೋ ಕಾರ್ಯಕ್ರಮದಡಿಯಲ್ಲಿ ಕರ್ನಾಟಕದ ಎಲ್ಲಾ ವೈದ್ಯರುಗಳು ಬೆಳಗಾಂನಲ್ಲಿ ಸೇರಿ ಅಧಿವೇಶನದ ಸಮಯದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ರಾಜ್ಯ ಅಧ್ಯಕ್ಷರಾದ ಡಾ. ಹೆಚ್. ಎನ್. ರವೀಂದ್ರ ತಿಳಿಸಿದರು.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿ‌ಎಂಇ 2017  ಕಾಯಿದೆ ತಿದ್ದುಪಡಿಯನ್ನು ತಡೆಹಿಡಿದು ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಕೋರಿ ಬೆಳಗಾಂ ಚಲೋ ಹಮ್ಮಿಕೊಂಡಿದ್ದೇವೆ. ಆ ಬಳಿಕ ನ.14 ರಿಂದ ಸ್ವಯಂ ಇಚ್ಚಿಸಿದ ವೈದ್ಯರ ತಂಡಗಳಿಂದ ಬೆಳಗಾಂನಲ್ಲಿ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಡಾ. ಸಚ್ಚಿದಾನಂದ ರೈ, ಡಾ. ಜಿ.ಕೆ ಭಟ್, ಡಾ. ಅಣ್ಣಯ್ಯ ಕುಲಾಲ್, ಡಾ ಯೂಸುಪ್ ಕುಂಬ್ಳೆ ಉಪಸ್ಥಿತರಿದ್ದರು.

ವರದಿ: ಶರತ್ ಮಂಗಳೂರು

Related posts

Leave a Reply