Header Ads
Breaking News

“ಕೆಮ್ ಮ್ಯಾಜಿಕ್” ಮಾಹಿತಿ ಮತ್ತು ಪ್ರಾತ್ಯಕ್ಷಿಕೆ: ವಿಶೇಷ ಶೈಕ್ಷಣಿಕ ಕಾರ್ಯಕ್ರಮ

ರಸಾಯನ ಶಾಸ್ತ್ರದಲ್ಲಿ ಬರುವ ಬೇರೆ ಬೇರೆ ಕ್ಲಿಷ್ಟಕರ ವಿಷಯಗಳನ್ನು ಪ್ರಯೋಗಗಳನ್ನು ಮಾಡುತ್ತಾ ಜೊತೆ ಜೊತೆಗೆ ಅದರಲ್ಲಿ ಅಡಗಿರುವ ರಸಾಯನ ಶಾಸ್ತ್ರದ ಅಂಶಗಳನ್ನು ತಿಳಿದುಕೊಂಡರೆ ರಸಾಯನ ಶಾಸ್ತ್ರ ಒಂದು ಸುಲಭದ ವಿಷಯವಾಗುತ್ತದೆ ಎಂದು ಮಂಗಳೂರಿನ ಸಂತ ಆಗ್ನೇಸ್ ಸ್ವಾಯತ್ತ ಕಾಲೇಜು ಇದರ ನಿವೃತ್ತ ಪ್ರಾಧ್ಯಾಪಕ ಹಾಗು ವಿಭಾಗದ ಮುಖ್ಯಸ್ಥ ಪ್ರೊ. ರೊನಾಲ್ಡ ಮಸ್ಕರೇನ್ಹಸ್ ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗವು ಬಿ ಎಸ್ ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ “ಕೆಮ್ ಮ್ಯಾಜಿಕ್” ಕಾರ್ಯಕ್ರಮದಲ್ಲಿ ರಸಾಯನ ಶಾಸ್ತ್ರದ ಹಲವಾರು ಪ್ರಯೋಗಗಳನ್ನು ಮಾಡಿ ತೋರಿಸಿ ರಸಾಯನ ಶಾಸ್ತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮತ್ತು ಕುತೂಹಲ ಮೂಡುವಂತೆ ಮಾಡಿದರು.

ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಜನರಿದ್ದು ಕೆಲವು ವ್ಯಕ್ತಿಗಳು ರಸಾಯನ ಶಾಸ್ತ್ರ ಪ್ರಯೋಗದ ಅಂಶಗಳನ್ನು ತಿಳಿದುಕೊಂಡು ಇತರರನ್ನು ವಂಚಿಸುತ್ತಾರೆ. ಆದ್ದರಿಂದ ನಾವು ರಸಾಯನ ಶಾಸ್ತ್ರದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇದರ ಮಾಹಿತಿ ಕೊಡುತ್ತ ವಂಚನೆಗೆ ಒಳಗಾಗುವವರಲ್ಲಿ ಜಾಗ್ರತಿ ಮೂಡಿಸಬೇಕು ಎಂದು ತಿಳಿಹೇಳಿದರು.

ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ನಂದಾಕುಮಾರಿ ಕೆ ಪಿ., ದಿವ್ಯ, ಗಾನವಿ, ಸಂಗೀತ ಮತ್ತು ಡಾ. ನಾರಾಯಣ ಹೆಬ್ಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ರಾಜೇಶ ಹೆಗಡೆ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕ್ಷಿತಿಜಾ ನಿರೂಪಿಸಿ, ರಾಜಾರಾಮ್ ಅತಿಥಿಗಳನ್ನು ಪರಿಚಯಿಸಿ, ಧರಣಿ ಸ್ವಾಗತಿಸಿ, ವೈಭವಿ ವಂದಿಸಿದರು.

Related posts

Leave a Reply

Your email address will not be published. Required fields are marked *