Header Ads
Header Ads
Breaking News

ಕೆರಾಡಿಯಲ್ಲಿ ಸುಸಜ್ಜಿತವಾದ ಆರೋಗ್ಯ ಉಪಕೇಂದ್ರ ಸಾರ್ವಜನಿಕರ ಸೇವೆಗೆ ಸಜ್ಜಾಗಿದೆ : ಡಾ. ಜಯಮಾಲಾ

ಕುಂದಾಪುರ: ಎಲ್ಲಿ ಜನರಿದ್ದಾರೋ ಅಲ್ಲಿಗೆ ವ್ಯವಸ್ಥೆಗಳು ಬರಬೇಕು. ಇದು ಗಾಂಧೀಜಿಯವರ ಕನಸು, ಗ್ರಾಮ ವಿಕಾಸದ ಕನಸು. ಅಂತೆಯೇ ಈ ದಿನ ಕೆರಾಡಿಯಲ್ಲಿ ಸುಸಜ್ಜಿತವಾದ ಆರೋಗ್ಯ ಉಪಕೇಂದ್ರ ನಿರ್ಮಾಣಗೊಂಡು ಸಾರ್ವಜನಿಕರ ಸೇವೆಗೆ ಸಜ್ಜಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ನುಡಿದರು.

ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರಾಡಿಯಲ್ಲಿ ಆರೋಗ್ಯ ಉಪಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕೆರಾಡಿ ಉಪಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಆದಷ್ಟು ಬೇಗ ಸಿಬ್ಬಂದಿಗಳನ್ನು ನೇಮಿಸುವ ಕೆಲಸಕ್ಕೆ ತಕ್ಷಣ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈ ಭಾಗದ ಜನರಿಗೆ ಆರೋಗ್ಯ ಕೇಂದ್ರ ಅವಶ್ಯಕತೆ ಇದೆ ಎಂದು ಸಚಿವೆ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಕೊಠಾರಿ, ಜಿ.ಪಂ. ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಉಪಸ್ಥಿತರಿದ್ದರು.

Related posts

Leave a Reply