Header Ads
Breaking News

ಕೆರೆಕಾಡು ತ್ಯಾಜ್ಯ ಸಂಗ್ರಹ ರಾಶಿಗೆ ಬೆಂಕಿ : ಹಿಂದೂ ರುದ್ರಭೂಮಿಯ ಸಮೀಪದಲ್ಲಿ ತ್ಯಾಜ್ಯ ಸಂಗ್ರಹ ಕೇಂದ್ರ

ಪಡುಪಣಂಬೂರು ಗ್ರಾಮ ಪಂಚಾಯತ್‍ನ ಬೆಳ್ಳಾಯರು ಕೆರೆಕಾಡಿನ ತ್ಯಾಜ್ಯ ಸಂಗ್ರಹ ರಾಶಿಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಆವರಿಸಿದ್ದು, ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಹಿಂದೂ ರುದ್ರಭೂಮಿಯ ಸಮೀಪದಲ್ಲಿ ಪಂಚಾಯತ್‍ನ ಈ ತ್ಯಾಜ್ಯ ಸಂಗ್ರಹದ ಕೇಂದ್ರವಿದ್ದು, ಅದರ ಹತ್ತಿರದಲ್ಲಿಯೇ ಪಂಚಾಯತ್ ಸದಸ್ಯರಾದ ತುಳಸಿ ಅವರ ಮನೆಯಿದೆ. ಹಲವು ಸಮಯಗಳಿಂದ ಇಲ್ಲಿ ರಸ್ತೆ ಪಕ್ಕದಲ್ಲಿಯೇ ಇರುವ ಈ ತ್ಯಾಜ್ಯ ರಾಶಿಯ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿದ್ದರು. ಬೆಂಕಿ ಹೇಗೆ ಬಿದ್ದಿದೆ ಎಂಬು ನಿಗೂಢವಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Related posts

Leave a Reply

Your email address will not be published. Required fields are marked *