Header Ads
Header Ads
Breaking News

ಕೆಲವೊಂದು ವಲಸೆ ಕಾಂಗ್ರೆಸ್ಸಿಗರಿಂದ ಸುಳ್ಳು ಹೇಳಿಕೆ ಖಂಡನೀಯ ಬಂಟ್ವಾಳದಲ್ಲಿ ಬಿಜೆಪಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಆಕ್ರೋಶ

 

ಬಂಟ್ವಾಳ: ದೇಶದಲ್ಲಿ ಜಾತಿ, ಧರ್ಮಗಳ ನಡುವೆ ಒಡೆದು ಆಳುವ ನೀತಿ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜಗತ್ತು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಕೆ.ಹರಿಕೃಷ್ಣ ಬಂಟ್ವಾಳ ವಿರುದ್ಧ ಕೆಲವೊಂದು ವಲಸೆ ಕಾಂಗ್ರೆಸಿಗರು ನೀಡುತ್ತಿರುವ ಸುಳ್ಳು ಹೇಳಿಕೆ ಖಂಡನೀಯವಾಗಿದೆ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಅಕ್ರೋಶ ವ್ಯಕ್ತಪಡಿಸಿದರು.

ಅವರು ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಉಚ್ಚಾಟನೆಗೊಂಡ ರಾಯಿ ಗ್ರಾ.ಪಂ.ಸದಸ್ಯ ಜಗದೀಶ ಕೊಯಿಲ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಬಿಲ್ಲವ ಮುಖಂಡರೇ ಅಲ್ಲ ಎಂಬ ನಿಂದನೆಗೆ ಪ್ರತಿಕ್ರಿಯಿಸಿದರು.
ಈ ಹಿಂದೆ ಬಿಜೆಪಿ ಕಾರ್ಯಕರ್ತನಾಗಿದ್ದ ಜಗದೀಶ ಕೊಯಿಲ ಇವರಿಗೆ ರಾಯಿ ತಾ.ಪಂ.ಗೆ ಸ್ಪರ್ಧಿಸಲು ಸೀಟು ಸಿಗಲಿಲ್ಲ ಎಂದು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಬಳಿಕ ಅವರನ್ನು ಉಚ್ಚಾಟನೆಗೊಳಿಸಲಾಗಿತ್ತು ಎಂದರು.

ಕಳೆದ ಎರಡು ವರ್ಷಗಳ ಹಿಂದೆ ರಾಯಿ-ಕೊಯಿಲ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆಂದು ಅನಧಿಕೃತವಾಗಿ ಚಿಟ್ ಫಂಡ್ ಇಟ್ಟಿದ್ದ ಇವರು ಸುಮಾರು ೪ ಲಕ್ಷ ಮೊತ್ತದ ಹಣವನ್ನು ಫಂಡಿನ ಸದಸ್ಯರಿಗೆ ನೀಡದೇ ವಂಚಿಸಿದ್ದಾರೆ. ಈ ಬಗ್ಗೆ ನೊಂದ ಸಂತ್ರಸ್ತ ಅರಳ ಲಕ್ಷ್ಮೀಧರ ಪೂಜಾರಿ ಸಹೋದರರು ಸ್ವತ: ಸಚಿವ ರಮಾನಾಥ ರೈ ಅವರಿಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಸದ್ದಿಗೋಷ್ಠಿಯಲ್ಲಿ ಸಂಗಬೆಟ್ಟು ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ವಸಂತ ಕುಮಾರ್ ಅಣ್ಣಳಿಕೆ, ರಾಯಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು.