Header Ads
Breaking News

ಕೆವಿಜಿ ಸುಳ್ಯ ಹಬ್ಬದ ಪ್ರಯುಕ್ತ ವಿವಿಧ ಕ್ರೀಡಾಕೂಟ : ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಪಂದ್ಯಾಟಗಳ ಆಯೋಜನೆ

ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡ ಅವರ ಜನ್ಮ ದಿನಾಚರಣೆಯ ಡಿ. 21ರಂದು ಅಂತಾರಾಜ್ಯ ಮಟ್ಟದ ಪುರುಷರ ಬ್ಯಾಡ್ಮಿಂಟನ್ ಹಾಗೂ ಡಿ. 22 ರಂದು ಸುಳ್ಯ ತಾಲ್ಲೂಕಿನ ಪುರುಷರ ಹಾಗೂ ಮಹಿಳೆಯರ ಮತ್ತು ಬಾಲಕ -ಬಾಲಕಿಯರಿಗೆ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆವಿಜಿ ಸುಳ್ಯ ಹಬ್ಬದ ಕ್ರೀಡಾ ಸಂಚಾಲಕ ದೊಡ್ಡಣ್ಣ ಬರೆಮೇಲು ಹೇಳಿದರು

ಅವರು ಸುಳ್ಯದಲ್ಲಿ ಸುದ್ದಿಗೋಷಟಿಯಲ್ಲು ಉದ್ದೇಶಿಸಿ ಮಾತನಾಡಿ ಡಿಸೆಂಬರ್ 24 ರಂದು ಸುಳ್ಯ ತಾಲ್ಲೂಕು ಲಗೋರಿ ಅಸೋಸಿಯೇಷನ್ ಮತ್ತು ದ.ಕ.ಜಿಲ್ಲಾ ಲಗೋರಿ ಅಸೋಸಿಯೇಷನ್ ಸಹಕಾರದೊಂದಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟವನ್ನು ಸಂಘಟಿಸಲಾಗಿದೆ. ರಾಜ್ಯದ ಎಂಟು ತಂಡಗಳು ಈಗಾಗಲೇ ಹೆಸರು ನೋಂದಾಯಿಸಿ ತಾಲೂಕಿನ ಆಸಕ್ತ ಕ್ರೀಡಾಪಟುಗಳಿಗೆ ಲಗೋರಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಪದಾಧಿಕಾರಿಗಳಾದ ಎನ್.ಎ. ರಾಮಚಂದ್ರ, ಶರೀಫ್ ಕಂಠಿ ಉಪಸ್ಥಿತರಿದ್ದರು. ಅಬ್ದುಲ್ ರಹಿಮಾನ್ ಮೊಗರ್ಪಣೆ ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ

 

Related posts

Leave a Reply

Your email address will not be published. Required fields are marked *