Header Ads
Header Ads
Header Ads
Breaking News

ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಯರು ಬೋಳಿಯಾರಿ ಒಡಕ್ಕಿನಕಟ್ಟೆಯಲ್ಲಿ ಕೆಸರ್‌ಡ್ ಒಂಜಿ ದಿನ

‘ ಪ್ರೇಮನಾಥೆ ಪಾಸ್ ಆತೆ , ಮಲ್ಲಾ ಕ್ಲಾಸು ಪೊರ್‍ಲು ಕಲ್ತೆ, ಏಕನಾಥೆ ಬಂಜಾರ ತೆಲ್ತೆ’ ಇಂತಹ ತುಳುಚಿತ್ರದ ಹಾಡಿಗೆ ತುಳುನಾಡಿನ ಗದ್ದೆಯಲ್ಲಿ ತುಳುನಾಡಿನವರ ಜತೆಗೆ ಜರ್ಮನಿಯ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದು, ಬೋಳಿಯಾರು ಜಕ್ರಿಬೆಟ್ಟು ಕುಂಟೆಪುಣಿ ಬಾಕಿಮಾರು ಗದ್ದೆಯಲ್ಲಿ.
ಬೋಳಿಯಾರು ಒಡಕ್ಕಿನಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಭಾನುವಾರ ನಡೆದ ಗೋವಿಗಾಗಿ ಮೇವು ಎಂಬ ಆಶಯದೊಂದಿಗೆ ಜರಗಿದ ಕೆಸರ್‍ದ ಕಂಡಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟ ಹಾಗೂ ಭತ್ತದ ನಾಟಿ ಕಾರ್ಯದಲ್ಲಿ ಜರ್ಮನಿಯ ವಿದ್ಯಾರ್ಥಿನಿಯರಿಬ್ಬರು ಕೈಜೋಡಿಸುವುದರ ಮೂಲಕ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು. ಗದ್ದೆಗಳಲ್ಲಿ ಒಂದು ದಿನ (ಕೆಸರ್‌ಡ್ ಒಂಜಿ ದಿನ) ಕಾರ್ಯಕ್ರಮ ಬಹುತೇಕ ಎಲ್ಲೆಡೆ ನಡೆಯುತ್ತದೆ . ಆದರೆ ಬೋಳಿಯಾರು ರಾಮ ಭಜನಾ ಮಂಡಳಿ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಆಟದ ಜತೆಗೆ ಕೃಷಿಗೆ ಪೂರಕವಾದ ಕಾರ್ಯಗಳಾದ, ಹಡಿಲು ಬಿದ್ದ ಗದ್ದೆಯಲ್ಲಿ ಉಳುಮೆ, ಭತ್ತದ ನಾಟಿ ಕಾರ್ಯ ಕೂಡ ಜರಗಿತು.
ಗದ್ದೆಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆ, ಭತ್ತದ ಕೃಷಿಯನ್ನು ಮರೆತ ಯುವಜನತೆಗೆ ಕೃಷಿ ಚಟುವಟಿಕೆಯತ್ತ ಪ್ರೋತ್ಸಾಹ, ಉತ್ಪತ್ತಿಯಾದ ಭತ್ತದ ಹುಲ್ಲನ್ನು ಗೋ ಶಾಲೆಗೆ ಸಮರ್ಪಿಸುವುದು, ಜಾನಪದ ಕ್ರೀಡೆಗಳ ಜತೆಯಲ್ಲಿ ಮಣ್ಣಿನ ಸಂಪರ್ಕ ಯುವಕರಲ್ಲಿ ಬೆಳೆಯುವಂತೆ ಮಾಡುವುದು, ಊರಿನ ಜನರ ಒಗ್ಗಟ್ಟು, ಸಾಮರಸ್ಯ ಬಲಪಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು.
ವಿದೇಶಿ ವಿದ್ಯಾರ್ಥಿನಿಯರು : ಜರ್ಮನಿಯಿಂದ ವಿಶೇಷ ಅಧ್ಯಯನಕ್ಕೆಂದು ಮಂಗಳೂರಿಗೆ ಬಂದ ೨೦ ಮಂದಿ ವಿದ್ಯಾರ್ಥಿನಿಯರು ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು
ಬೆಳಗ್ಗಿನಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಮಕ್ಕಳು, ಒಡಕ್ಕಿನಕಟ್ಟೆ ನಿವಾಸಿಗಳು ಹಾಗೂ ಮಂದಿರದ ಸರ್ವ ಸದಸ್ಯರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದರು.
ಗದ್ದೆಯಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್, ಸಂಗೀತ ಕುರ್ಚಿ, ಮಡಕೆ ಒಡೆಯುವುದು, ನಿಧಿ ಶೋಧನೆ, ಮೂರು ಕಾಲಿನ ಓಟ ಪುರುಷರಿಗೆ, ಮಹಿಳೆಯರಿಗೆ, ಬಾಲಕ ಬಾಲಕಿಯರಿಗೆ, ಪ್ರತ್ಯೇಕವಾಗಿ ನಡೆಯಿತು. ಇವೆಲ್ಲದರ ನಡುವೆ ದಂಪತಿಗಳಿಗೆ ವಿಶೇಷ ಸ್ಪರ್ಧೆಗಳು ನಡೆದು ಕಾರ್ಯಕ್ರಮ ಉತ್ಸಾಹಭರಿತವಾಗಿ ಜರಗಿತು.

ಗದ್ದೆಗೆ ಕೋಣ ಇಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಗತಿಪರ ಕೃಷಿಕರಾದ ಗುಣಕರ ಆಳ್ವ ಬೋಳ್ಯಾರುಗುತ್ತು ಉದ್ಘಾಟಿಸಿದರು. ದೇಜಪ್ಪ ಮೂಲ್ಯ ಮನ್ಕಾರ್, ಸೀತಾರಾಮ ಶೆಟ್ಟಿ ಬೋಳ್ಯಾರು ಪೊಯ್ಯೆ, ಪದ್ಮನಾಭ ಮೂಲ್ಯ ಒಡಕ್ಕಿನಕಟ್ಟೆ, ಶಿವಪ್ಪ ನಾಯ್ಕ್ ಕಟ್ಟದಬಾಗಿಲು ಮುಖ್ಯ ಅತಿಥಿಗಳಾಗಿದ್ದರು. ಲಕ್ಷ್ಮೀಶ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಹಿರಿಯ ಪ್ರಗತಿಪರ ಮಹಿಳಾ ಕೃಷಿಕರಾದ ಕಲ್ಯಾಣಿ ಒಡಕ್ಕಿನಕಟ್ಟೆ, ವಸಂತಿ ಶೆಟ್ಟಿ ಕುಂಟುಪುಣಿ, ಪುಷ್ಪಾ ಸಂಕೇಶ, ಅಪ್ಪಿ ಸಂಕೇಶ, ವಿಮಲ ಕುಕ್ಕೋಟ್ಟು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related posts

Leave a Reply