Header Ads
Breaking News

ಕೆಸರುಮಯವಾದ ಪಣಂಬೂರು ಪರಿಸರ..! ವಾಹನ ಸವಾರರಿಗೆ ಹಾಗೂ ಜನರಿಗೆ ಭಾರೀ ತೊಂದರೆ..!

ಒಂದು ಕಡೆ ಕೆಸರುಮಯವಾದ ರಸ್ತೆ, ಮತ್ತೊಂದು ಕಡೆ ಹೊಂಡ ಗುಂಡಿಗಳಲ್ಲಿ ನಿಂತಿರುವ ನೀರು, ಇನ್ನೊಂದು ಕಡೆ ಕೆಸರುಮಯವಾದ ರಸ್ತೆಯಲ್ಲಿ ವಾಹನಗಳ ಸಂಚಾರ.. ಈ ದೃಶ್ಯ ಕಮಡು ಬಂದಿದ್ದು ಎಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೊಡಿ.

ಹೌದು. ಮಳೆಗಾಲ ಆರಂಭವಾಯ್ತು ಅಂದ್ರೆ ಸಾಕು ಹೊಂಡ ಗುಂಡಿಗಳಲ್ಲಿ ನೀರು ನಿಲ್ಲಲು ಶುರುವಾಗುತ್ತೆ. ಇದರಿಂದಾಗಿ ಇಡೀ ಕೆಸರುಮಯವಾಗಿ ಬದಲಾಗುತ್ತೆ. ಆದ್ರೆ ಕೆಲವು ಕಡೆ ಈ ಸಮಸ್ಯೆಗೆ ಮುಕ್ತಿ ಸಿಕ್ಕಿರುವ ಉದಾಹರಣೆಗಳು ಕೂಡಾ ಇದೆ. ಆದ್ರೆ ಮಂಗಳೂರು ಹೊರವಲಯದ ಪಣಂಬೂರಿನಲ್ಲಿ ಪೆಟ್ರೋಲ್ ಪಂಪ್‌ನ ಎದುರುಗಡೆಯೇ ಅಲ್ಲಲ್ಲಿ ನಿರು ನಿಂತಿದ್ದು, ಇಡೀ ಪ್ರದೇಶವೇ ಕೆಸರುಮಯವಾಗಿ ಗೋಚರಿಸ್ತಾ ಇದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ರೋಗಾಣುಗಳು ಹರಡೋದು ಜಾಸ್ತಿ. ಹಾಗಾಗಿ ಇಂತಹ ನೀರು ನಿಂತ ಪ್ರದೇಶದಲ್ಲಿ ಇನ್ನೂ ಹೆಚ್ಚು ಸೊಳ್ಳೆ ಉತ್ತತಿಯಾದ್ರೆ ಇನ್ನೂ ಹೆಚ್ಚಿನ ರೋಗಾಣುಗಳು ಹರಡುವಂತಹ ಸಾಧ್ಯತೆ ಇದೆ. ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ರಸ್ತೆಗಳ ಅಭಿವೃದ್ಧಿ ಕಾರ್ಯ ಮಾಡುತ್ತೆ. ಆದ್ರೆ ಪ್ರತೀ ರಸ್ತೆ ಬದಿಗಳಲ್ಲಿ ಚರಂಡಿ ನಿರು ಹೋಗಲು ವ್ಯವಸ್ಥೆ ಇಲ್ಲದೇ ಹೋದ್ರೆ ಇಂತಹ ಸಮಸ್ಯೆಗಳು ಕಂಡು ಬರುತ್ತೆ.
ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸ್ತಾ ಇದ್ದು, ನಿಮತ ನಿರಿನಿಂದಾಗಿ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದ್ರೂ ಸಮಸ್ಯೆಯ ಕಡೆಗೆ ಗಮನಹರಿಸಿ ಪರಿಹಾರ ಒದಗಿಸ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

Related posts

Leave a Reply

Your email address will not be published. Required fields are marked *