Header Ads
Header Ads
Breaking News

ಕೆಸರ್ ಕಂಡೊಡು ಆಟಿದ ಒಂಜಿ ದಿನತ್ತ ಕ್ರೀಡಾಕೂಟ

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ತುಳುನಾಡ ಫ್ರೆಂಡ್ಸ್ ವತಿಯಿಂದ ಕೆಸರ್ ಕಂಡೊಡು ಆಟಿದ ಒಂಜಿ ದಿನತ್ತ ಕ್ರೀಡಾಕೂಟ ಕುಂಡಡ್ಕ ಮಾಗಣಿ ಮನೆಯ ಕಂಬಳ ಗದ್ದೆಯಲ್ಲಿ ಭಾನುವಾರ ನಡೆಯಿತು.

ತುಳುನಾಡಿನ ಜನಪ್ರಿಯ ಕ್ರೀಡೆಗಳಾದ ನಿಧಿ ಶೋಧನೆ, ಹಗ್ಗಜಗ್ಗಾಟ, ಕಬಡ್ಡಿ, ಪಿರಮಿಂಡ್ ರಚನೆ ಮೂಲಕ ಮಡಕೆ ಒಡೆಯುವುದು. ಕೆಸರುಗದ್ದೆ ಓಟ, ಮಡಕೆ ಒಡೆಯುವುದು. ಹಾಳೆಯಲ್ಲಿ ಎಳೆಯುವುದು, ಲಿಂಬೆ ಚಮಚ ಓಟ, ತೆಂಗಿನಕಾಯಿ ಸೀಳುವುದು ಮೊದಲಾದ ಸ್ಪರ್ಧೆಗಳು ನಡೆದವು. ನಿಧಿ ಶೋಧ ಸ್ಪರ್ಧೆಯಲ್ಲಿ ೧೦ ಬಹುಮಾನಗಳನ್ನು ನೀಡಲಾಯಿತು. ಮಕ್ಕಳು ಹಾಗೂ ಮಹಿಳೆಯರು ನಿಧಿಶೋಧದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಕೆಲಸದ ಮನೆ ಕೆಲಸದಲ್ಲಿ ಇರುತ್ತಿದ್ದ ಮಹಿಳೆಯರು, ಹೊರಗಡೆ ಕೆಲಸದ ಒತ್ತಡದಲ್ಲಿರುತ್ತಿದ್ದ ಪುರುಷರು, ಶಾಲೆ ಪಾಠ ಪ್ರವಚನದಲ್ಲಿ ಬ್ಯುಸಿ ಇರುತ್ತಿದ್ದ ಮಕ್ಕಳು ಭಾನುವಾರ ರಿಲ್ಯಾಕ್ಸ್ ಮೂಡ್‌ನಲ್ಲಿ ಬೆಳಿಗ್ಗೆನಿಂದ ಸಂಜೆ ವರೆಗೂ ಕೆಸರು ಗದ್ದೆಯಲ್ಲಿ ತಮ್ಮದೇ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಈ ಕ್ರೀಡಕೂಟಕ್ಕೆ ಊರಿನ ಹಿರಿಯರು ಮಾರ್ಗದರ್ಶನ ನೀಡಿದ್ದು, ಮಾತ್ರ ವಿಶೇಷವಾಗಿತ್ತು.

ಕಾರ್ಯಕ್ರಮವನ್ನು ಪಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ಹಿಂದಿನ ಕಾಲದಲ್ಲಿ ಗ್ರಾಮಸ್ಥರು ಎಲ್ಲಾ ಸೇರಿ ತುಳುನಾಡಿನ ವಿವಿಧ ಬೇಸಾಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಹಿಂದೆ ಜನರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಆದರೆ ಇಂದು ಅವುಗಳು ಮರೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮತ್ತೆ ತುಳು ಸಂಸ್ಕೃತಿಯನ್ನು ಉಳಿಸುವ ಕಾರ್ಯಗಳು ನಡೆಯುತ್ತಿದೆ. ಮಕ್ಕಳು ಮತ್ತು ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದಾಗ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಲಿದೆ ಎಂದರು.

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ವೇಣುಗೋಪಾಲ ಶೆಟ್ಟಿ ಮರುವಾಳ, ವಿಟ್ಲ ಸೀಮೆಯ ಅಧ್ಯಕ್ಷ ವೆಂಕಟೇಶ್ವರ್ ಭಟ್, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ರವೀಶ ಶೆಟ್ಟಿ ಪಿಲಿಂಜ, ಸಂಘಟನಾ ಕಾರ್ಯದರ್ಶಿ ದಯಾನಂದ ಉಜಿರೆಮಾರ್, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಬೇರಿಕೆ, ಅಬೀರಿ ಅತೀಕಾರಬೈಲು ಯುವ ಕೇಸರಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ತುಳುನಾಡ ಫ್ರೆಂಡ್ಸ್‌ನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಬರೆ, ದಿವಕರ ಶೆಟ್ಟಿ,ವಿಠಲ ಪೂಜಾರಿ ಅತಿಕಾರಬೈಲು, ನಾಗೇಶ್ ಕುಂಡಡ್ಕ, ಉಮೇಶ್ ಗೌಡ, ನಾರಾಯಣ ಗೌಡ ಓಟೆಮನೆ, ಪ್ರಶಾಂತ್ ಗೌಡ, ದಿನೇಶ್ ಕೊಲ್ಯ, ಸುಧಾಕರ ಶೆಟ್ಟಿ, ಅಶೋಕ, ಸುಂದರ ಪೂಜಾರಿ, ಮನೋಜ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply