Header Ads
Header Ads
Breaking News

ಕೆಸರ್ ಕಂಡೊಡು ಒಂಜಿದಿನ ಕಾರ್ಯಕ್ರಮ ಅಮೃತ ವಿದ್ಯಾಲಯಂ ಶಾಲೆಯ ಮಕ್ಕಳಿಂದ ಆಯೋಜನೆ

ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಶಾಲೆಯ ಮಕ್ಕಳು ಜೀವನ ಕೌಶಲ್ಯ ಅಭಿವೃದ್ಧಿ ಚಟುವಟಿಕೆಯ ಅಂಗವಾಗಿ ಪಡುಶೆಡ್ಡೆ ಗ್ರಾಮದ ಬೊಂದೆಲ್‌ನ ಕೆಸರು ಗದ್ದೆಗೆ ಇಳಿದು ಭತ್ತದ ಗಿಡಗಳನ್ನು ನಾಟಿ ಮಾಡುವ ಮೂಲಕ ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಹತ್ತನೇ ತರಗತಿಯ ನಲವತ್ತು ಮಂದಿ ಮಕ್ಕಳು ಮತ್ತು ನಾಲ್ಕನೇ ತರಗತಿಯ ನಲವತ್ತು ಮಂದಿ ಮಕ್ಕಳು ಶಾಲಾ ಪ್ರಾಂಶುಪಾಲರಾದ ಅನುಪಮ ರಾವ್ ಮತ್ತು ಆಧ್ಯಾಪಕಿ ಶರ್ಮಿಳಾ ಅವರ ನೇತೃತ್ವದಲ್ಲಿ ಪಡುಶೆಡ್ಡೆಯ ಸುರೇಶ್ ಕುಮಾರ್ ಎಂಬವರ ಹೊಲದಲ್ಲಿ ಕೃಷಿ ಕೆಲಸಗಳಲ್ಲಿ ನಿರತರಾದರು.ಕೆಲವು ವಿದ್ಯಾರ್ಥಿಗಳು ನೇಜಿ ಕಿತ್ತರು. ಕೆಲವರು ಕಟ್ಟುಗಳನ್ನು ತಲೆಯಲ್ಲಿ ಹೊತ್ತು ಸಾಗಿಸಿದರು. ಇನ್ನೂ ಕೆಲಸವರು ನೇಜಿ ನೆಟ್ಟರು. ನೀರನ್ನು ಏತದ ಮೂಲಕ ಗದ್ದೆಗೆ ಹಾಯಿಸಿದರು. ನಗರದ ವಿದ್ಯಾರ್ಥಿಗಳು ತುಂಬಾ ಸಂತೋಷದಿಂದ ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲದೆ, ಕೆಲವರು ಮುಂದೆ ಕೃಷಿಯನ್ನು ತಮ್ಮ ಜೀವನ ವೃತ್ತಿಯಾಗಿ ಕೈಗೊಳ್ಳುವ ಇಚ್ಚೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅಮೃತ ವಿದ್ಯಾಲಯಂ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಲಾಮೃತ ಚೈತನ್ಯ ಕೃಷಿಯಲ್ಲಿ ತಲ್ಲೀನರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಹಳ್ಳಿಯ ಪರಿಸರದಲ್ಲಿ ಹಳ್ಳಿಗರಂತೆಯೇ ಬತ್ತದ ನಾಟಿ ಕೆಲಸ ನಿರ್ವಹಿಸಿದ ಯುವ ಉತ್ಸಾಹಿ ತಂಡವನ್ನು ಊರಿನವರು ಪ್ರಶಂಸಿದರು.

Related posts

Leave a Reply