Header Ads
Breaking News

ಕೆ‌ಎಂಸಿ ಸಂಚಾರ ಜಾಗೃತಿ, ಕದ್ರಿ ಪಾರ್ಕ್‌ನಲ್ಲಿ ಬೀದಿ ನಾಟಕ

ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಕೆ‌ಎಂಸಿ ಆಸ್ಪತ್ರೆಯ ವತಿಯಿಂದ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಕೆ‌ಎಂಸಿ ವಿದ್ಯಾರ್ಥಿಗಳಿಂದ ಸಂಚಾರಿ ಜಾಗೃತಿ ಬೀದಿ ನಾಟಕ ನಡೆಯಿತು.
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಂಗಳೂರಿನ ಕೆ‌ಎಂಸಿ ಆಸ್ಪತ್ರೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಫೊರೆನ್ಸಿಕ್ ಮೆಡಿಸಿನ್, ಎಮೆರ್ಜೆನ್ಸಿ ಮೆಡಿಸಿನ್ ಹಾಗೂ ಕಮ್ಯೂನಿಟಿ ಮೆಡಿಸಿನ್ ವಿಭಾಗದ ವತಿಯಿಂದ ಈ ಒಂದು ವಾರಗಳ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯೋಜಿಸಲಾಗಿತ್ತು.
ಮೇ ೮ರಂದು ಪ್ರಾರಂಭಗೊಂಡ ಈ ಸಪ್ತಾಹವು ಕದ್ರಿಯಲ್ಲಿ ಸಮಾಪ್ತಿಗೊಂಡಿತು. ಸಮಾರೋಪ ದಿನದಂದು ಕೆ‌ಎಂಸಿ ವಿದ್ಯಾರ್ಥಿಗಳಿಂದ ಕದ್ರಿ ಪಾರ್ಕ್‌ನಲ್ಲಿ ಬೀದಿ ನಾಟಕ ನಡೆದವು. ಸುಮಾರು ೧೨ ಮಂದಿಯಷ್ಟಿದ್ದ ವಿದ್ಯಾರ್ಥಿಗಳ ತಂಡದಿಂದ, ಜಾಗೃತಿ ನಾಟಕ ನಡೆಯಿತು.