Header Ads
Header Ads
Header Ads
Breaking News

ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣ ಸಚಿವ ಪ್ರಮೋದ್ ಮಧ್ವರಾಜ್ ಶಂಕು ಸ್ಥಾಪನೆ

ಆಂಕರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಾದ ವತಿಯಿಂದ ಉಡುಪಿಯ ಸಿಟಿ ಬಸ್‌ನಿಲ್ಧಾಣದ ಸಮೀಪ ಸುಮಾರು ೪೧ಸೆಂಟ್ಸ್ ಜಾಗದಲ್ಲಿ ೪ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು.

ಬಸ್ ನಿಲ್ದಾಣ ಕ್ಕೆ ಸಚಿವ ಪ್ರಮೋದ್ ಮದ್ವರಾಜ್ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ೪ಕೋಟಿ ವೆಚ್ಚದಲ್ಲಿ ಆರಂಭವಾಗುವ ಬಸ್ ನಿಲ್ದಾಣದಲ್ಲಿ ಮೂರು ಅಂತಸ್ತಿನಲ್ಲಿ ಏಕ ಕಾಲದಲ್ಲಿ ೧೦ ಬಸ್ಸುಗಳು ಏಕ ಕಾಲದಲ್ಲಿ ನಿಲ್ಲಲು ಹಾಗೂ ೨೦ ಕಾರುಗಳ ಪಾರ್ಕಿಂಗ್ ಹಾಗೂ ವಾಣಿಜ್ಯ ಮಳಿಗೆಗೆ ವ್ಯವಸ್ಥೆ ಮಾಡಲಾಗಿದೆ. ಉಡುಪಿಯ ಬನ್ನಂಜೆಯಲ್ಲಿ ೩ಎಕ್ರೆ ಪ್ರದೇಶದಲ್ಲಿ ೩೫ ಕೋಟಿ ವೆಚ್ಚದಲ್ಲಿ ಮಣಿಪಾಲ, ಉಡುಪಿ ಹಾಗೂ ಮಲ್ಪೆಯಲ್ಲಿ ಹೈಟೆಕ್ ಬಸ್ ನಿಲ್ಧಾಣ ಆರಂಭಿಸಲಾಗುವುದು ಎಂದರು.


ರಾಜ್ಯ ರಸ್ತೆ ಸಾರಿಗೆ ನಿಗಮದ ಅದ್ಯಕ್ಷ ಹಾಗೂ ಶಾಸಕರ ಗೋಪಾಲ ಪೂಜಾರಿಮಾತನಾಡಿ ಕಾರ್ಕಳದಲ್ಲಿ ಸೂಕ್ತ ಸ್ಥಳ ನೀಡಿದರೆ ಕೆ.ಎಸ್.ಆರ್.ಟಿಸಿ ಬಸ್‌ನಿಲ್ಧಾಣ ಕ್ಕೆ ಹಣ ಬಿಡುಗಡೆ ಮಾಡಲಾಗುವುದು . ಬೈಂದೂರಿನಲ್ಲಿ ಬಸ್ ಡಿಪೋ , ಬಸ್ ನಿಲ್ಧಾಣಕ್ಕೆ ೧೦ಕೋಟಿ ರೂ ಮೀಸಲಿಡಲಾಗಿದೆ. ಕಾರ್ಕಳ, ಬೈಂದೂರು ನಲ್ಲಿ ಹೊಸ ಡಿಪೋ ನಿರ್ಮಾಣವಾದರೆ ಶೀಘ್ರವೇ ಉಡುಪಿಗೆ ಪ್ರತ್ಯೇಕ ವಿಭಾಗ ಆರಂಭಿಸಲಾಗುವುದು ಎಂದರು.

ಸಮಾರಂಭದಲ್ಲಿ ಕೆ.ಎಸ್.ಆರ್.ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ಮುಖ್ಯ ಕಾಮಗಾರಿ ಅಭಿಯಂತರ ನರೇಂದ್ರ ಕುಮಾರ್, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಜೈ ಶಾಂತ್ ಕುಮಾರ್, ಶರಣ್ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.

ವರದಿ; ಪಲ್ಲವಿ ಸಂತೋಷ್

Related posts

Leave a Reply