Header Ads
Header Ads
Breaking News

ಕೆ.ಎಸ್.ಹೆಗ್ಡೆಯಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಯ ಸುರಕ್ಷಾ ಕ್ರಮಗಳ ಬಗ್ಗೆ ಕಾರ್ಯಾಗಾರ

ವೈದ್ಯಕೀಯ ಕ್ಷೇತ್ರದಲ್ಲಿ ಆರೋಗ್ಯದ ಆರೈಕೆಗೆ ಸಂಬಂಧಪಟ್ಟ ಉನ್ನತ ಗುಣಮಟ್ಟವನ್ನು ಸಾಧಿಸಲು ಲ್ಯಾಪರೋಸ್ಕಾಪಿಕ್ ಮೂಲಕ ಪಿತ್ತಕೋಶದ ಶಸ್ತ್ರಚಿಕಿತ್ಸೆಯ ಸುರಕ್ಷಾ ಕ್ರಮಗಳ ಬಗ್ಗೆ ಶೈಕ್ಷಣಿಕ ಕಾರ್ಯಾಗಾರಗಳು ಪೂರಕ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ| ಪಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್. ಮೆಡಿಕಲ್ ಅಕಾಡೆಮಿ ಇದರ ಸರ್ಜರಿ ವಿಭಾಗದ ಆಶ್ರಯದಲ್ಲಿ ಲ್ಯಾಪರೋಸ್ಕಾಪಿಕ್ ಮೂಲಕ ಪಿತ್ತಕೋಶದ ಶಸ್ತ್ರಚಿಕಿತ್ಸೆಯ ಸುರಕ್ಷಾ ಕ್ರಮಗಳ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.

ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಂಟಾಲಾಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಷನ್‌ನ ವಿಭಾಗ ಮುಖ್ಯಸ್ಥ ಡಾ| ಸಾದಿಕ್ ಶಿಕೋರಾ ಮಾತನಾಡಿ ಲ್ಯಾಪರೋಸ್ಕಾಪಿಕ್ ಮೂಲಕ ಪಿತ್ತಕೋಶದ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮಶಸ್ತ್ರಚಿಕಿತ್ಸಾ ಪ್ರಕ್ರಿಯೆಯಾಗಿದ್ದು ಇಂತಹ ಚಿಕಿತ್ಸೆ ಸಂದರ್ಭದಲ್ಲಿ ಸುರಕ್ಷಾ ಕ್ರಮಗಳ ಬಗ್ಗೆ ವೈದ್ಯರಲ್ಲಿ ಅರಿವು ಮುಖ್ಯವಾಗಿ ಅಗತ್ಯವಿದೆ ಎಂದರು.

ಕ್ಷೇಮ ಸರ್ಜರಿ ವಿಭಾಗ ಮುಖ್ಯಸ್ಥ ಡಾ| ರಾಜಶೇಖರ್ ಮೋಹನ್ ಮಾತನಾಡಿ ಲ್ಯಾಪರೋಸ್ಕಾಪಿಕ್ ಮೂಲಕ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಸಂಬಂಽಸಿದ ಕೋರ್ಸ್ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರಿಗೆ ಸರ್ಜನ್‌ಗಳಿಗೆ ಶಿಕ್ಷಣ ಮಾರ್ಗದರ್ಶನದೊಮದಿಗೆ ಸುರಕ್ಷತಾ ಕ್ರಮಗಳ ಅರಿವು ಮೂಡಿಸಲು ಸಹಕಾರಿ. ಇದರಿಂದ ವೈದ್ಯರೊಂದಿಗೆ ರೋಗಿಗಳಿಗೂ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯ ವಿಭಾಗ ನಿರ್ದೇಶಕ ಡಾ| ದಿನೇಶ್ ಕಿಣಿ, ಬೆಂಗಳೂರಿನ ವೈದ್ಯರಾದ ಡಾ| ಕಿಶೋರ್, ಡಾ| ಸೋಮನಾಥ್ ಮಳಗೆ, ಮುಂಬಯಿಯ ಜಸ್‌ಲಾಕ್ ಆಸ್ಪತ್ರೆಯ ಸರ್ಜನ್ ಡಾ| ನಿಲೇಶ್ ಎಚ್., ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೆ.ಎಸ್,ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಽಕ್ಷಕ ಮೇಜರ್ ಡಾ| ಶಿವ ಕುಮಾರ್ ಹೀರೇಮಠ್, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ಡಾ| ಹರೀಶ್‌ಚಂದ್ರ ಉಪಸ್ಥಿತರಿದ್ದರು.