Header Ads
Header Ads
Breaking News

ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಮಧುಮೇಹ ದಿನಾಚರಣೆ

ದೇರಳಕಟ್ಟೆ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಸಮುದಾಯ ಆರೋಗ್ಯ ವಿಭಾಗದ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಗ್ಲಾಸ್ ಹೌಸ್‌ನಲ್ಲಿ ವಿಶ್ವ ಮಧುಮೇಹ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ| ಶ್ರೀಕಾಂತ್ ಆಚಾರ್ಯರವರು ಮಾತನಾಡಿ, ಮಧುಮೇಹ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಮಧುಮೇಹ ರೋಗ ಬರದ ಹಾಗೆ ಜಾಗೃತಿ ಮೂಡಿಸುವುದು ಯುವ ವೈದ್ಯರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವೈಸ್ ಡೀನ್‌ಗಳಾದ ಡಾ| ಎ.ಎಂ. ಮಿರಾಜ್‌ಕರ್, ಡಾ| ಜಯಪ್ರಕಾಶ್ ಶೆಟ್ಟಿ ವೈದ್ಯಕೀಯ ಅಽಕ್ಷಕ ಮೇಜರ್ ಡಾ| ಶಿವಕುಮಾರ್ ಹಿರೇಮಠ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ನೃತ್ಯದ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.ಕ್ಷೇಮ ಕಮ್ಯುನಿಟಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ| ಸಂಜೀವ ಬಡಿಗೇರ್, ಡಾ| ಶಾಂಭವಿ ಭಾರದ್ವಜ್, ಡಾ| ರಶ್ಮಿ ಕುಂದಾಪುರ್ ಉಪಸ್ಥಿತರಿದ್ದರು.

Related posts

Leave a Reply