Header Ads
Header Ads
Breaking News

ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ಕ್ಲಿನಿಕಲ್ ಸರ್ಜರಿ ಪುಸ್ತಕ ಬಿಡುಗಡೆ ಡಾ.ಸಿ.ಆರ್ ಬಲ್ಳಾಲ್‌ರ ‘ಕಾಂಪ್ರೆಹೆನ್ಸಿವ್ ಕ್ಲಿನಿಕಲ್ ಸರ್ಜರಿ’ಎಂಬ ಪುಸ್ತಕ

 

ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಡಾ.ಸಿ.ಆರ್ ಬಲ್ಳಾಲ್ ಬರೆದ ‘ಕಾಂಪ್ರೆಹೆನ್ಸಿವ್ ಕ್ಲಿನಿಕಲ್ ಸರ್ಜರಿ’ಎಂಬ ಪುಸ್ತಕವನ್ನ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಬಿಡುಗಡೆಗೊಳಿಸಿದರು


ಬಳಿಕ ಮಾತನಾಡಿದ ಅವರು, ವೈದ್ಯಕೀಯ ರಂಗ ಸ್ಪರ್ಧಾತ್ಮಕವಾಗಿ ಬೆಳೆಯದೆ, ಜ್ಞಾನ ಹಂಚುವ ವಿಭಾಗವಾಗಿ ಬೆಳೆಯಲಿ ಎಂದು ಅಭಿಪ್ರಾಯಪಟ್ಟರು.ಸದ್ಯ ವೈದ್ಯಕೀಯ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದರಿಂದ ರೋಗಿಗಳಿಗೆ ಸರಿಯಾದ ಶುಶ್ರೂಷೆಯೂ ದೊರೆಯುತ್ತಿಲ್ಲ ಅನ್ನುವ ವಾತಾವರಣವೂ ಸೃಷ್ಟಿಯಾಗುತ್ತಿದೆ. ವಾಸ್ತವವಾಗಿ ವೈದ್ಯಕೀಯ ಕ್ಷೇತ್ರವೆಂದಲ್ಲಿ ಜ್ಞಾನದ ಹಂಚುವಿಕೆ ಮೂಲವಾಗಿರುತ್ತದೆ. ಅದೇ ಹಾದಿಯಲ್ಲಿ ವೈದ್ಯರು ಸಾಗುವ ಅನಿವಾರ್‍ಯತೆ ಇದೆ. ವೈದ್ಯಕೀಯ ರಂಗದ ವಿವಿಧ ವಿಭಾಗಗಳ ನಡುವೆ ಸಂವಹನದ ಕೊರತೆ ಹಲವು ಬಾರಿ ಉದ್ಭವಿಸುತ್ತಿದೆ. ಇದನ್ನು ಜತೆಯಾಗಿ ಕೊಂಡೊಯ್ಯುವ ಸಲುವಾಗಿ ಹಾಗೂ ರೋಗಿಯ ಹಿತದೃಷ್ಟಿಯನ್ನು ಕಾಪಾಡುವ ಎಲ್ಲಾ ಜ್ಞಾನವೂ ಡಾ.ಸಿ.ಆರ ಬಲ್ಲಾಳ್ ಅವರು ಬರೆದ ಪುಸ್ತಕದಿಂದ ವೃದ್ಧಿಸಬಹುದು ಎಂದರು.

ಪುಸ್ತಕ ಬರೆದ ಡಾ.ಸಿ.ಆರ್ ಬಲ್ಲಾಳ್ ಮಾತನಾಡಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಅನುಕೂಲವಾಗುವ ಮಾಹಿತಿಯನ್ನು ಆಧರಿಸಿದ ಪುಸ್ತಕ ಇದಾಗಿದೆ. ವೈದ್ಯಕೀಯ ಸೇವೆಯಲ್ಲಿನ ಅನುಭವ ಹಾಗೂ ರೋಗಿಗಳ ಪ್ರತಿಕ್ರಿಯೆಗಳು ಉಲ್ಲೇಖಿತಗೊಂಡಿವೆ ಎಂದರು.

ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ.ಶಾಂತರಾಮ್ ಶೆಟ್ಟಿ, ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ, ಯೇನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಜಯಕುಮಾರ್ ಹಾಗೂ ಡಾ.ಎಂ.ಎಸ್.ಮೂಡಿತ್ತಾಯ ಮುಖ್ಯ ಅತಿಥಿಗಳಾಗಿದ್ದರು.
ಆರೀಫ್ ಉಳ್ಳಾಲ

Related posts

Leave a Reply