Header Ads
Header Ads
Header Ads
Breaking News

ಕೆ ಪಾಂಡ್ಯರಾಜ್ ಬಲ್ಲಾಳ್ ಪಿಯು ಕಾಲೇಜಿನ ವಾರ್ಷಿಕೋತ್ಸವ ಶ್ರಮವಹಿಸಿ ಕಾರ್ಯಗಳನ್ನು ಪೂರ್ಣಗೊಳಿಸಿ ಪೊಲೀಸ್ ಅಧಿಕಾರಿ ಕೆ ರಾಮರಾವ್ ಅಭಿಪ್ರಾಯ

ಮೂಲ ಶಿಕ್ಷಣ ಮತ್ತು ಶ್ರಮವಹಿಸಿ ಕಾರ್‍ಯಗಳನ್ನು ಪೂರ್ಣಗೊಳಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡಲ್ಲಿ ನಾಯಕತ್ವದ ಗುಣಗಳು ಬೆಳೆಯಲು ಸಾಧ್ಯ ಎಂದು ಪೊಲೀಸ್ ಅಧಿಕಾರಿ ಕೆ.ರಾಮ ರಾವ್ ಹೇಳಿದ್ದಾರೆ.ಅವರು ಉಳ್ಳಾಲದ ಸೋಮೇಶ್ವರ ರಸ್ತೆಯಲ್ಲಿರುವ ಕೆ.ಪಾಂಡ್ಯರಾಜ್ ಬಲ್ಲಾಳ್ ಪಿ.ಯು ಕಾಲೇಜಿನ ಮೂರನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಜತೆಗೆ ಲೋಕಜ್ಞಾನವನ್ನು ಪಡೆಯಿರಿ. ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಮಾತ್ರವಲ್ಲ, ಸೆಂಟ್ರಲ್ ಫೋರ್ಸ್, ಡಿಫೆನ್ಸ್ ನಲ್ಲಿಯೂ ಬಹಳಷ್ಟು ಉದ್ಯೋಗ ಅವಕಾಶಗಳು ಇವೆ. ಅದರಲ್ಲಿಯೂ ಉದ್ಯೋಗ ಗಳಿಸುವಂತೆ ಶಿಕ್ಷಣವನ್ನು ಪಡೆಯಬಹುದು ಎಂದರು 

ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎಲ್.ಧರ್ಮ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಣ್ಣು ಮಕ್ಕಳನ್ನು ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸಿದ ಕಾಲೇಜು ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. 
ಕಾಲೇಜು ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್ ಉಪಸ್ಥಿತರಿದ್ದರು.
ವಾರ್ಷಿಕೋತ್ಸವ ಪ್ರಯುಕ್ತ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕೆ.ಪಾಂಡ್ಯರಾಜ್ ಬಲ್ಲಾಳ್ ಆಡಳಿತ ಅಧಿಕಾರಿ ಟ್ರಸ್ಟಿ ಡಾ. ಪ್ರಿಯಾ ಬಲ್ಲಾಳ್ ಕೆ. ಹಾಗೂ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಕೈನಿ ಸಿಸಿಲಿಯಾ ಬಹುಮಾನ ವಿತರಿಸಿದರು.
ವರದಿ: ಆರೀಪ್ ಉಳ್ಳಾಲ

Related posts

Leave a Reply