Header Ads
Header Ads
Header Ads
Breaking News

ಕೆ.ಪಿ.ಎಂ.ಇ. ಕಾಯ್ದೆ ತಿದ್ದುಪಡಿಗೆ ಐ.ಎಮ್.ಎ. ವಿರೋಧ ಶುಕ್ರವಾರ ಖಾಸಗಿ ಆಸ್ಪತ್ರೆ ವೈದ್ಯಕೀಯ ಸೇವೆ ಸ್ಥಗಿತ ಐ‌ಎಮ್‌ಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ.ಸಾಯಿ ಗೀತಾ ಜ್ಷಾನೇಶ್ ಹೇಳಿಕೆ

ಸುಳ್ಯ: ಕರ್ನಾಟಕ ಸರಕಾರ ಜಾರಿಗೆ ತರಲು ಹೊರಟಿರುವ ಕೆ.ಪಿ.ಎಮ್.ಇ. ಕಾಯ್ದೆಯ ತಿದ್ದುಪಡಿಯಿಂದ ಗಂಭೀರ ಪರಿಣಾಮಗಳು ಉಂಟಾಗಲಿದ್ದು, ಇದನ್ನು ಪ್ರತಿಭಟಿಸಿ ಇಂಡಿಯನ್ ಮೆಡಿಕಲ್ ಆಸೋಸಿಯೇಶನ್ ನ.೩ರಂದು ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

ಐ‌ಎಮ್‌ಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ.ಸಾಯಿ ಗೀತಾ ಜ್ಷಾನೇಶ್ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿ ಈ ಕಾಯ್ದೆಯ ತಿದ್ದುಪಡಿಗಳಿಂದ ಆಗುವ ಗಂಭೀರ ಪರಿಣಾಮಗಳನ್ನು ಭಾರತೀಯ ವೈದ್ಯಕೀಯ ಸಂಘ ಹಲವು ಬಾರಿ ಮುಖ್ಯ ಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ, ಜಂಟಿ ಸದನ ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತ್ತು, ಆದರೂ ನಮ್ಮ ಆಹವಾಲನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ.

ಈಗ ಜಾರಿಗೆ ತರಲು ಹೊರಟಿರುವ ಹಲವು ಆಂಶಗಳಿಂದ ಆಗುವ ಅನಾಹುತಗಳ ಬಗೆಗೆ ನ್ಯಾಯ ಮೂರ್ತಿ ವಿಕ್ರಮ್‌ಜಿತ್ ಸೇನ್‌ರವರ ಸಮಿತಿಯ ಮುಂದೆ ಐ‌ಎಮ್‌ಎ ಮಂಡಿಸಿದಾಗ ಅವರು ಇದನ್ನು ಪರಿಗಣಿಸಿದ್ದರು, ಈಗಿನ ಆರೋಗ್ಯ ಸಚಿವರು ಈ ವರದಿಯನ್ನು ಕಡೆಗಣಿಸಿ ತಮಗೆ ಬೇಕಾದ ಅಂಶಗಳುನ್ನು ಜಾರಿಗೆ ತರಲು ತೀರ್ಮಾನಿಸಿದ್ದಾರೆ. ಇದು ಆಸ್ಪತ್ರೆಗಳ ಮೇಲೆ, ವೈದ್ಯರ ಮೇಲೆ, ಸಿಬ್ಬಂದಿಗಳ ಮೇಲೆ ಮತ್ತು ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಈ ತಿದ್ದುಪಡಿಗಳನ್ನು ಕೈಬಿಡಲು ಆಗ್ರಹಿಸಿ ನ.೩ರಂದು ಪ್ರತಿಭಟನೆ ನಡೆಯಲಿದೆ. ಅಂದು ಖಾಸಗಿ ಆಸ್ಪತ್ರೆಗಳ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸ್ಥತಗೊಳಿಸುತ್ತೇವೆ. ಸುಳ್ಯದಿಂದ ವೈದ್ಯರು ಮಂಗಳೂರಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ನಮ್ಮ ಆಗ್ರಹದ ನಡುವೆಯೂ ಸರಕಾರ ಈ ತಿದ್ಧುಪಡಿಯನ್ನು ಯಥಾವತ್ತಾಗಿ ಜಾರಿಗೆ ತಂದgನಮ್ಮ ವೃತ್ತಿಗೂ ವಿದಾಯ ಹೇಳಬೇಕಾದ ಸಂದರ್ಭ ಬರಬಹುದು ಎಂದು ಡಾ. ಸಾಯಿಗೀತಾ ಜ್ಷಾನೇಶ್ ಹೇಳಿದರು.

ಐ‌ಎಮ್‌ಎ ಸುಳ್ಯ ಶಾಖೆಯ ಪೂರ್ವಾದ್ಯಕ್ಷ ಡಾ. ಶಂಕರ್ ಭಟ್, ಕಾರ್ಯದರ್ಶಿ ಡಾ. ಗೀತಾ ದೊಪ್ಪ , ಕೋಶಾಧಿಕಾರಿ ಡಾ. ನವ್ಯ ಅವರು, ಕಾಯ್ದೆಯಿಂದಾಗುವ ತೊಂದರೆಗಳನ್ನು ವಿವರಿಸಿದರು. ಈಗಾಗಲೇ ಗ್ರಾಹಕರ ನ್ಯಾಯಾಲಯ, ಮೆಡಿಕಲ್ ಕೌನ್ಸಿಲ್‌ಗಳು ರೋಗಿಗಳಿಗೆ ನ್ಯಾಯ ಒದಗಿಸಲು ಇರುವ ಸಂಸ್ಥೆಗಳಾಗಿದ್ದು, ಈಗಿನ ತಿದ್ದುಪಡಿಯಂತೆ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಕುಂದು ಕೊರತೆ ಪರಿಹಾರ ಸಮಿತಿಯ ರಚನೆ ಆವಶ್ಯಕತೆಯಿಲ್ಲ. ಸದುದ್ದೇಶದಿಂದ ಚಿಕಿತ್ಸೆ ನೀಡಿದ ತಪ್ಪಿಗೆ ಆಕಸ್ಮಿಕ ಅನಾಹುತವಾದಲ್ಲಿ ವೈದ್ಯ ಜೈಲು ಪಾಲು ಆಗುವ ಕಾನೂನು ಕೂಡಾ ಸರಿಯಲ್ಲ ಎಂದು ಹೇಳಿದರು.
ವರದಿ: ಪದ್ಮನಾಭ್ ಸುಳ್ಯ

Related posts

Leave a Reply